ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಜಾತಿ ಸೆನ್ಸಸ್ ಆರಂಭವಾಗಲಿ

ಒಂಬತ್ತು ವರ್ಷಗಳ ಹಿಂದೆಯೇ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ನಲ್ಲಿ ಕರ್ನಾಟಕದಲ್ಲಿ ಜಾತಿವಾರು ಜನಗಣತಿಗೆಂದು ಇಪ್ಪತ್ತು ಕೋಟಿ ರುಪಾಯಿಗಳ...

Rashmi Kasaragodu
Updated On : 29 May 2013, 11:09 am

ಒಂಬತ್ತು ವರ್ಷಗಳ ಹಿಂದೆಯೇ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ನಲ್ಲಿ ಕರ್ನಾಟಕದಲ್ಲಿ ಜಾತಿವಾರು ಜನಗಣತಿಗೆಂದು ಇಪ್ಪತ್ತು ಕೋಟಿ ರುಪಾಯಿಗಳ ವ್ಯವಸ್ಥೆಯನ್ನು ಮಾಡಿದ್ದರು. ಆ ವೇಳೆಗಾಗಲೆ ಈ ಜಾತಿ ಜನಗಣತಿಯ ಬೇಡಿಕೆ ಹಳೆಯದಾಗಿತ್ತು.
ದೇವೇಗೌಡರು ಪ್ರತಿಪಕ್ಷದ ನಾಯಕರಾಗಿದ್ದ ಕಾಲದಲ್ಲೇ ವಿಧಾನ ಸಭೆಯಲ್ಲಿ ಈ ವಿಚಾರದಲ್ಲಿ ಒಂದು ಖಾಸಗಿ ನಿರ್ಣಯವನ್ನು ಮಂಡಿಸುವ ಪ್ರಯತ್ನ ನಡೆದಿತ್ತು. ಸಿದ್ದರಾಮಯ್ಯ ಅವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವುದು ನಿಜ.
ರಾಮಕೃಷ್ಣ ಹೆಗಡೆ ಕಾಲದ ವೆಂಕಟಸ್ವಾಮಿ ಆಯೋಗದ ವರದಿಯಲ್ಲಿ ಸಾಕಷ್ಟು ವಿವರವಾಗಿ ಈ ವಿಚಾರ ಪ್ರಸ್ತಾಪವಾಗಿದ್ದರೂ, ಆಯೋಗದ ಶಿಫಾರ್ಸುಗಳನ್ನು ಸರ್ಕಾರ ಒಪ್ಪಲಿಲ್ಲ. ರಾಜ್ಯದಲ್ಲಿ ಆಗ ಇದ್ದ ವಾತಾವರಣ ಅಂತಹದ್ದು.
ಈಗ ಕಾಲ ಬದಲಾಗಿದೆ. ಇತರೆ ಹಿಂದುಳಿದ ಜಾತಿ ಪಂಗಡಗಳನ್ನು ಹೆಚ್ಚು ಸ್ಫುಟವಾಗಿ ಗುರ್ತಿಸುವ ಅಗತ್ಯ ಕಂಡು ಬಂದಿದೆ. ಹಿಂದುಳಿದವರು, ಸ್ವಲ್ಪ ಹಿಂದುಳಿದಿರುವವರು, ತುಂಬಾ ಹಿಂದುಳಿದಿರುವವರು ಎನ್ನುವಂತಹ ವರ್ಗೀಕರಣಕ್ಕೆ ಹಲವಾರು ಜಾತಿ- ಪಂಗಡಗಳ ಪ್ರಾತಿನಿಧಿಕ ಸಂಘಟನೆಗಳು ಒತ್ತಾಯಪಡಿಸಿವೆ.
ಈಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ. ಅವರ ಮೊದಲ ದಿನಗಳಲ್ಲೇ ಜಾತಿವಾರು ಜನಗಣತಿಗೆ ಆದೇಶ ನೀಡಿದರೆ, ಕನಿಷ್ಠ ಪಕ್ಷ, ಮುಂದಿನ ವರ್ಷದ ವೇಳೆಗಾದರೂ ಹಿಂದುಳಿದಿರುವವರಿಗೆ ತೃಪ್ತಿಯಾಗುವಂತಹ ಸಾಮಾಜಿಕ ನ್ಯಾಯ ವಿತರಣೆಯ ನೀತಿಯನ್ನು ರೂಪಿಸುವುದು ಸಾಧ್ಯವಾಗಬಹುದು. ಇಲ್ಲಿ ಹಣದ ಅಭಾವದ ಮಾತು ಬರಬಾರದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement