ಎಲ್ಲರಿಗೂ ಸಮಾನ ಅಧಿಕಾರ ಮತ್ತು ಅವಕಾಶ ಇದೆಯೆಂದು ಸಂಬಿಸಲ್ಪಟ್ಟಿರುವ ವ್ಯವಸ್ಥೆ
(ಜನ) ಸೇವೆಯನ್ನೂ ಲಾಭಕರವಾಗಿಸಿಕೊಳ್ಳೋದುಇಲ್ಲಿ ಮಾತ್ರ ಸಾಧ್ಯ
ಬ್ರಿಟಿಷರ ಆಳ್ವಿಕೆಯ ಮಹತ್ವವನ್ನು ನಮಗೆ ಪದೇ ಪದೇ ತಿಳಿಸುತ್ತಿರುವ ಪದ್ಧತಿ
ಇಲ್ಲಿ ಅಪರಾಧಿಗೆ ಆಶ್ರಯ ಮತ್ತು ಬೆಂಬಲ ನೀಡಲಾಗುವುದು. ಯಾವುದೇ ದೇಶ ಅಕ್ರಮವೆಸಗಿದರೂ ಶಾಂತಿ ಮಂತ್ರ ಪಠಿಸಲಾಗುವುದು
ಇವತ್ತಿನ ರೌಡಿಯೇ ನಾಳಿನ ಮಂತ್ರಿ
ಇವತ್ತು ಕಾನೂನಿನ ಶಿಕ್ಷೆಗೆ ಒಳಗಾದವನು ನಾಳೆ ಮಂತ್ರಿಯಾಗಿ ಕಾನೂನನ್ನೇ ಬದಲಿಸಬಹುದು ಇಲ್ಲಿ
ಇವತ್ತಿನ ಮತದಾರ ಮಾತ್ರ ನಾಳೆಯೂ ಮತದಾರ ಅಷ್ಟೇ
ಇದು ಈರುಳ್ಳಿ ಇದ್ದಂತೆ, ತಿರುಳಿದೆ ಎಂಬ ಭ್ರಮೆಯಲ್ಲಿ ಸುಲಿದಷ್ಟೂ ಸಿಗೋದು ಕಣ್ಣೀರು ಮಾತ್ರ
ದೊಡ್ಡವರು ಇನ್ನಷ್ಟು ದೊಡ್ಡವರಾಗುತ್ತಲೇ ಹೋಗುವಚಿಕ್ಕವರು ಮಾತ್ರ ಚೊಕ್ಕವಾಗುವ ಸ್ಥಿತಿ
ಎಲ್ಲವೂ ಇದೆ, ಆದರೆ ಏನೂ ಇಲ್ಲ
ಆಡಳಿತ ಪಕ್ಷಕ್ಕೊಂದು ಕಾಲ ವಿರೋಧ ಪಕ್ಷಗಳಿಗೊಂದು ಕಾಲ
-ವಿಶ್ವನಾಥ ಸುಂಕಸಾಳ
vishwasunkasal@yahoo.com