ಇದನ್ನು ಬಳಸಿಕೊಂಡು ಫಾಯದೆ ಮಾಡಿಕೊಳ್ಳುವವರೇ ಜಾಸ್ತಿ
ಕಾಯಿದೆ ಇದೆಯೆಂದು ಯಾರೂ ಕಾಯುವುದಿಲ್ಲ
ಒಳಗೆಲ್ಲ ಹಣ್ಣಾಗಿ ಕೊಳೆತರೂ ಹೊರಗೆ ಮಾತ್ರ ಕಾಯಿ
ಉಲ್ಲಂಘಿಸಿದಾಗ ಮಾತ್ರ ಇದರ ಅಸ್ತಿತ್ವ ನೆನಪಾಗುತ್ತದೆ
ವಾಯಿದೆ ಮೀರಿದರೆ ಆಗ ಕಾಯಿದೆ ಜಾಗೃತವಾಗುತ್ತದೆ
ಇದೊಂಥರ ಹಿರಿಯರ ಉಪದೇಶ ಇದ್ದ ಹಾಗೆ. ಮಾಡಬೇಡ ಎನ್ನುತ್ತದೆ...ಕೇಳುವವರೇ ಇಲ್ಲ
ಇದನ್ನು ತಿಳಿದುಕೊಂಡು ಲಾಯರ್ ಆಗಬಹುದು, ನಂತರ ಕಾನೂನನ್ನು ಕಾನೂನಿನಿಂದಲೇ ಮುರಿಯಬಹುದು
ಇದೊಂಥರ ಜೇಡರ ಬಲೆ, ಸಣ್ಣ ಹುಳುಗಳು ತಪ್ಪಿಸಿಕೊಳ್ಳುತ್ತವೆ ಮತ್ತು ದೊಡ್ಡ ಹುಳುಗಳು ಬಲೆಯನ್ನೇ ಹರಿದುಕೊಂಡು ಹೋಗುತ್ತವೆ
ಕಾಯಿದೆಯನ್ನು ಪಾಲಿಸಬೇಕೆಂದು ನೀವು ಯಾರ ಬಳಿಯಾದರೂ ವಾದಿಸಿದರೆ ಅವರ ಪ್ರಕಾರ ನಿಮ್ಮಷ್ಟು ಮೂರ್ಖರು ಯಾರೂ ಇಲ್ಲ
ಇದಕ್ಕೆ ಕಾನ್ (ಕಿವಿ) ಇಲ್ಲ. ಅದಕ್ಕೇ ಇದು ಕಾನೂನು
ಲಾ ತಿಳಿದುಕೊಂಡವನೇ ಸಮಾಜದಲ್ಲಿ ದೊಡ್ಡ ಜನ ಕಣಲಾ
-ವಿಶ್ವನಾಥ ಸುಂಕಸಾಳ
vishwasunkasal@yahoo.com