ಕತ್ತಲೆಯಲ್ಲಿ ಬೆಳಕಿನಾಟ
ನೂರು ತ್ರಾಸುಗಳನ್ನೆಲ್ಲ ಮಾರು ತಾಸು ಮರೆಸುವ ಮಾಯಾಲೋಕ
ಒಳಗಿನ ಅತೃಪ್ತ ಬಯಕೆಗಳನ್ನೆಲ್ಲ ಇದನ್ನು ನೋಡುವ ಮೂಲಕ ತೀರಿಸಿಕೊಳ್ಳಬಹುದು
ವಾಸ್ತವ ಜಗತ್ತಿಗೂ ಇದರ ಕತೆಗೂ ಹೆಚ್ಚಿನ ಸಮಯ ಸಂಬಂಧ ಕಲ್ಪಿಸಬಾರದು
ಮದುವೆಯಾದರೆ ಸುಖಾಂತ್ಯವೆಂದೂ, ಪ್ರೇಮ ಮುರಿದು ಬಿದ್ದರೆ ದುಃಖಾಂತ್ಯವೆಂದೂ ಉಲ್ಟಾ ಕರೆಸಿಕೊಳ್ಳುತ್ತದೆ
ಗೆದ್ದರೆ ಕೋಟಿ, ಸೋತರೆ ಚೀಟಿ
ಕ್ಲಾಸ್‌ಗೆ ಬಂಕ್ ಹಾಕಲೊಂದು ಸೂಕ್ತ ನೆವ
ಥಿಯೇಟರ್‌ನಲ್ಲಿ ಪ್ರೇಯಸಿಯೊಂದಿಗೆ ಸಲ್ಲಪಿಸಲೊಂದು ಸದವಕಾಶ
ಪೋಷ್ಟರ್ ಹೀರೋಯಿನ್‌ಗಳಿಗೆ ಕೊಟಿ ಪಲ್ಲವಿಯ ಹಾಡು
ಕುಟುಂಬದವರೆಲ್ಲ ಕೂತು ಬೇರೆ ಕುಟುಂಬದವರ ಕತೆ ನೋಡುವ ಸಮಯ
ಟಿವಿಯಲ್ಲಿ ಜಾಹೀರಾತಿನ ನಡು ನಡುವೆ ಕಾಣಿಸಿಕೊಳ್ಳುವ ಚಿತ್ರ ತುಣುಕು
ಸಿನಿಮಾ ಪ್ರಚಾರಕ್ಕೆಂದು ಮಾಡುವ ನಾಟಕವೂ ಒಂದು ಮಿನಿ ಸಿನಿಮಾ ಇದ್ದಂತೆಯೇ
-ವಿಶ್ವನಾಥ ಸುಂಕಸಾಳ
vishwasunkasal@yahoo.com