ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 1 Nov 2013, 10:04 am

ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ಕ.ಪ್ರ ಓದುವ ಎಲ್ಲರಿಗೂ 'ಸರಣಿ ಅಪಘಾತ'ಗಳು ಸರ್ವೇ ಸಾಮಾನ್ಯ. ಆದರೆ ಪ್ರಕಟವಾಗುವ ಚಿತ್ರಗಳನ್ನು ಕುರಿತಂತೆ ಸರಣಿ ಅಭಾಸ ಮಾತ್ರ ಆಗೊಮ್ಮೆ ಈಗೊಮ್ಮೆ, ಬಲು ಅಪರೂಪಕ್ಕೆ. ಅಂತಹ ಸನ್ನಿವೇಶ ಒದಗಿ ಬಂದಿದೆ.'
'ಅ.27 ಭಾನುವಾರದ  ಸಂಚಿಕೆಯಲ್ಲಿ 'ಸಂಡೆ ಮಂಡೆ'ಯಲ್ಲಿ ಎಡವಟ್ಟು ಜರುಗಿದೆ. ವಾಲ್ಮೀಕಿ ಚಿತ್ರದ ಅಭಾಸ ನಂತರ ಮತ್ತೊಂದು ಅಭಾಸ ರಾಮಾಯಣ ಕುರಿತಂತೆ ಆಗಿದೆ. ರಾಮ ರಾಮ ಅದುವೇ 'ಸೀತಾಫಲ'.'
'ಜನಿವಾರ (ಯಜ್ಞೋಪವೀತ) ಕಿತ್ತೊಗೆಯುವುದೇ ವೈಚಾರಿಕತೆ ಎಂದು ತಿಳಿದಿರುವ ಆಧುನಿಕರು ಇಂದು ನಮ್ಮೊಂದಿಗೆ ಕಾಣಸಿಗುತ್ತಾರೆ. ಭಾನುವಾರದ ಸಂಚಿಕೆಯಲ್ಲಿ 'ಸಂಡೆ ಮಂಡೆ' ಅಂಕಣದಲ್ಲಿ ಕಾರ್ಟೂನ್‌ನಲ್ಲಿ ಕಲಾವಿದ ಪದ್ಮನಾಭರ ಪರಿಕಲ್ಪನೆ ಸೊಗಸಾಗಿದೆ. ಸೀತೆಯ ಮಕ್ಕಳು ಎನ್ನುವ ಅರ್ಥ ಬರುವಂತೆ 'ಸೀತಾಫಲ'  ಎನ್ನುವ ಹೆಸರುಕೊಟ್ಟು 'ಲವ ಕುಶ'ರನ್ನು ಮುದ್ದಾಗಿ ಚಿತ್ರಿಸಿದ್ದಾರೆ.'
'ಆದರೆ ಚಿತ್ರಿಸುವ ಭರದಲ್ಲಿ ಎಡವಿ ಅವಳಿ-ಜವಳಿ ಮಕ್ಕಳಿಗೆ ಜನಿವಾರವನ್ನು ತಪ್ಪಾಗಿ ತೊಡಿಸಿದ್ದಾರೆ. ಇದಕ್ಕೆ ಅಪಸವ್ಯ ಎನ್ನುತ್ತಾರೆ. ತಿಥಿ, ತರ್ಪಣ ಕಾರ್ಯ ಮಾಡುವ ಅಶುಭ ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಈ ರೀತಿ ಧರಿಸಲಾಗುತ್ತೆ. ಇದನ್ನು ಅಮಂಗಳ ಎಂದು ಭಾವಿಸಲಾಗುತ್ತದೆ. ಸರಿಯಾಗಿ ಜನಿವಾರ ಧರಿಸುವುದೆಂದರೆ, ಎಡಭುಜದ ಮೇಲಿಂದ ಪ್ರಾರಂಭಿಸಿ ಪ್ರದಕ್ಷಿಣಾಕಾರವಾಗಿ ಹೊಟ್ಟೆ ಮತ್ತು ಬೆನ್ನು ಭಾಗವನ್ನು ಸುತ್ತು ಹಾಕುತ್ತದೆ.'
'ಯಜ್ಞೋಪವೀತದ ಪಾವಿತ್ರ್ಯವನ್ನು ನೆನೆಪಿಸುವಂತಹ ಮಂತ್ರ ಜ್ಞಾಪಕಕ್ಕೆ ಬರುತ್ತದೆ.  'ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೆ ಯತ್ಸಹಜಂ ಪುರಸ್ತಾತ್ ಆಯುಷ್ಯಮಗ್ರ್ಯಂ ಪ್ರತಿಮಂ ಚ ಶುಭ್ರಂ ಯಜ್ಞೋಪವೀತಂ ಬಲಂ ಅಸ್ತು ತೇಜಃ'
'ಯಾರು ಯಜ್ಞೋಪವೀತವನ್ನು ಪಾವಿತ್ರ್ಯದ ಭಾವನೆಯಿಂದ ಧರಿ ಸುತ್ತಾರೋ ಅವರ ಓಜಸ್ಸು, ತೇಜಸ್ಸು, ಆಯಸ್ಸು ವೃದ್ಧಿಯಾಗುತ್ತೆ ಎನ್ನುತ್ತದೆ ಈ ವೇದ ಮಂತ್ರ.'  'ಸದಾ ಮೈಮೇಲೆ ಇರುವ ಇದು ಧರಿಸಿರುವವನಿಗೆ ಮೂರು ಋಣಗಳನ್ನು ಸದಾ ನೆನೆಪಿಸುತ್ತದೆ. ಅವುಗಳೆಂದರೆ ದೇವ ಋಣ, ಋಷಿ ಋಣ ಮತ್ತು ಪಿತೃ ಋಣ. ಅದಕ್ಕೇ ಜನಿವಾರಕ್ಕೆ ಮೂರು ಎಳೆ. ಪಾಂಚಭೌತಿಕ ಮಾನುಷ ಶರೀರದಲ್ಲಿದ್ದು, ಅಂತರ್ಗತರಾಗಿ ಸರ್ವ ವ್ಯಾಪಾರ ನಡೆಸುವ ದೇವತೆಗಳು, ಜ್ಞಾನದ ಸಲುವಾಗಿ ತಪಗೈದ ಆಯಾ ಗೋತ್ರದ ಋಷಿಗಳು, ದೇಹವನ್ನು ಪೀಳಿಗೆಯಲ್ಲಿ ತಂದು ಕೊಟ್ಟ ತಂದೆ, ತಾತ, ಮುತ್ತಾತ ... ರೂಪದ ಪಿತೃಗಳು. ಶ್ರೌತ ಸ್ಮಾರ್ತ ನಿತ್ಯ ಕರ್ಮ ಅನುಷ್ಠಾನ ಸಿದ್ದ್ಯರ್ಥಂ (ಶ್ರುತಿ ಯಾ ವೇದದಲ್ಲಿ ಹೇಳಿದ ಮತ್ತು ಸ್ಮೃತಿಗಳಲ್ಲಿ ತಿಳಿಸಿದ ಕರ್ಮ ಅನುಷ್ಠಾನಕ್ಕೆ) ಜನಿವಾರ ಅತ್ಯವಶ್ಯಕ. ಅದಿಲ್ಲದಿದ್ದರೆ ವ್ಯರ್ಥ ಎನ್ನುತ್ತೆ ವೇದ ವಾಕ್‌' ಎಂದಿದ್ದಾರೆ.
ಎಸ್. ರಾಘವೇಂದ್ರ ಅವರು 'ಯಜ್ಞೋಪವೀತದ' ಕುರಿತು ಹೇಳಿದ್ದೇನೋ ಸರಿ. ಆದರೆ ಎಸ್.ವಿ. ಪದ್ಮನಾಭ ಅವರು 'ಲವ-ಕುಶ'ರಿಗೆ ಜನಿವಾರ ತೊಡಿಸಿಲ್ಲ. ಅವರು ಬಾಣಗಳನ್ನು ಇರಿಸಿಕೊಳ್ಳುವ ಬತ್ತಳಿಕೆಯನ್ನು ಕಟ್ಟಿಕೊಂಡ ಬಳ್ಳಿಯನ್ನು ಚಿತ್ರಿಸಿದ್ದಾರೆ. ಅದನ್ನೇ ಎಸ್. ರಾಘವೇಂದ್ರ ಅವರು 'ಯಜ್ಞೋಪವೀತ' ಎಂದು ಭಾವಿಸಿದ್ದಾರೆ.

 ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement