ಮೊದಲ ಚುಂಬನ ದಂತ ಭಗ್ನ ಈ ಕಾಲಕ್ಕೆ ಸಮೀಕರಿಸಿ ಹೇಳುವುದಾದರೆ?
ಕಂಚಿಗನಹಳ್ಳಿ ಧನಂಜಯ, ಸಿರಾ, 9141308498
ಮೊದಲ ಚುಂಬನ ದಂತ ಭಗ್ನ ಈ ಕಾಲಕ್ಕೆ ಸಮೀಕರಿಸಿ ಹೇಳುವುದಾದರೆ?
ಡಾಬರ್ ಹಲ್ಲುಪುಡಿಯಿಂದಲೇ ಹಲ್ಲು ಉಜ್ಜಿದ್ದರೆ ಹೀಗಾಗುತ್ತಿರಲಿಲ್ಲ!
ತಲವಾಟ ಮಂಜುನಾಥ, ಸಾಗರ, 9480831611
ಮದುವೆಗೆ ಮುಂಚೆ ಚುರುಕಾಗಿದ್ದವರು, ಮದುವೆಯಾದ ನಂತರ ಮಂಕಾಗಲು ಕಾರಣವೇನು?
ಊಟದ ಮೊದಲು ಚುರುಕಾಗಿದ್ದವರು, ಊಟವಾದ ಮೇಲೆ ಮಂಕಾಗುವುದಿಲ್ಲವೇ!
ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಪ್ರೇಯಸಿ ಇಲ್ಲದ ಜೀವನ ಕಡುಬಿಸಿಲಿನ ಹಾಗೆ. ಪ್ರೇಯಸಿಯ ನೋಟ?
ತಂಪೆರೆವ ಮಳೆಯ ಹಾಗೆ.
ರವಿಕುಮಾರ ಜಿ.ಬಿ. 9449669897
ಬೆಂಗಳೂರಿನಲ್ಲಿ ಸಿನಿಮಾ ಟಾಕೀಸ್ಗಳು ಒಂದೊಂದೇ ಕಣ್ಮರೆಯಾಗುತ್ತಿದೆ. ಯಾಕಿರಬಹುದು?
ಸಿನಿಮಾಗಳು ಕೂಡ ಟಾಕೀಸ್ನಿಂದ ಬೇಗ ಕಣ್ಮರೆಯಾಗುವುದೇ ಕಾರಣ.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಮರದಲ್ಲಿರುವ ಹಣ್ಣಿಗೂ, ಮನದಲ್ಲಿರುವ ಹೆಣ್ಣಿಗೂ ವ್ಯತ್ಯಾಸವೇನು?
ಒಂದನ್ನು ಪಡೆಯಲು ಕಲ್ಲು ಹೊಡೆಯಬೇಕು, ಇನ್ನೊಂದಕ್ಕೆ ಕಣ್ಣು ಹೊಡೆಯಬೇಕು.
ಬಾಣಭಟ್ಟ