ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕರ್ನಾಟಕ ಕಲ್ಯಾಣ ರಾಜ್ಯವಾಗುವುದು ಯಾವಾಗ ಭಟ್ರೆ?

Rashmi Kasaragodu
Updated On : 4 Nov 2013, 10:55 am

ಸಿ.ನಾಗರಾಜ, ಅರದೋಟ್ಲು, ಭದ್ರಾವತಿ
ಪ್ರೇಯಸಿ ಇಲ್ಲದ ಜೀವನ ಕಡುಬಿಸಿಲಿನ ಹಾಗೆ. ಪ್ರೇಯಸಿಯ ನೋಟ?
ತಂಪೆರೆವ ಮಳೆಯ ಹಾಗೆ.


ಕಂಡಿಗನಹಳ್ಳಿ ಧನಂಜಯಯ ಶಿವ
ಕರ್ನಾಟಕ ಕಲ್ಯಾಣ ರಾಜ್ಯವಾಗುವುದು ಯಾವಾಗ ಭಟ್ರೆ?
ಶಾದಿ ಮಾಡಿಸುವುದು ಕೂಡ ಕಲ್ಯಾಣವೇ!


ಪ್ರಮೋದ್ ಕುಮಾರ್, ಹೆಚ್.ಆರ್.ಬಿ. ಲೇಔಟ್ ರಾಯಚೂರು
ಸಾಯುವವಾಗ ಮನಷ್ಯನಿಗೆ ಮಾತೇ ಹೋಗುತ್ತದಲ್ಲ ಏಕೆ?
'ನಾನು ಸತ್ತೆ' ಎಂದು ಹೆಣ ಕೂಗಬಾರದಲ್ಲ!


ಲಕ್ಷ್ಮಿ ಬರ್ಕಲಿರಾಮ್, ಕಿರಗಂದೂರು
ಏನು ಮಾಡಿದರೆ ಮಾನವ ಜನ್ಮ ಸಾರ್ಥಕವಾಗುತ್ತದೆ?
"ನನ್ನ ಸೇವೆ ಮಾಡಿದರೆ" ಅಂದರಂತೆ ನಿತ್ಯಾನಂದ ಸ್ವಾಮಿಗಳು!


ಪೇಂಟರ್ ಪಾಪು, ಸಂತೇಮರಹಳ್ಳಿ, 9008877712
ಕೆಲವರು ಬಾತ್ ರೂಂನಲ್ಲಿದ್ದಾಗ ಮಾತ್ರ ಹಾಡುವುದೇಕೆ?
ಯಾರೂ ಬಂದು ಬಡಿಯುವುದಕ್ಕೆ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement