ರಾಗಿ ಮುದ್ದೆಗೂ ಮಾಗಿ ನಿದ್ದೆಗೂ ಏನು ಸಂಬಂಧ?
ಕೆ. ಎಂ. ಲಿಂಗರಾಜು, ನಂಜನಗೂಡು
ರಾಗಿ ಮುದ್ದೆಗೂ ಮಾಗಿ ನಿದ್ದೆಗೂ ಏನು ಸಂಬಂಧ?
ಮುದ್ದೆ ಹೆಚ್ಚಾದರೆ ನಿದ್ದೆ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಕಾಡಿ ಬೇಡಿ ಪಡೆದ ಪ್ರೀತಿಗೂ, ಒಲಿದಪ್ರೀತಿಗೂ ಇರೋ ವ್ಯತ್ಯಾಸವೇನು?
ಕಾಡಿ ಬೇಡಿ ಪಡೆದ ಪ್ರೀತಿ ಓಡಿಹೋಗುವ ಸಾಧ್ಯತೆ ಹೆಚ್ಚು!
ಬಸವನಗೌಡ, ಚನ್ನಗಿರಿ
ಸತ್ತವರೆಲ್ಲ ಶಿವನ ಪಾದ ಸೇರ್ತಾರಾ ಭಟ್ರೆ?
ಈ ಕಾಲದಲ್ಲಿ ಯಮನ ಪಾದ ಸೇರುವವರೇ ಜಾಸ್ತಿ!
ಕಾಳೀಹುಂಡಿ ಶಿವಕುಮಾರ್, ಮೈಸೂರು
ಈ ಕ್ಷಣ ಶಾಶ್ವತವಲ್ಲ ಅಂತ ಗೊತ್ತಿದ್ದರೂ ಮನಸ್ಸು ಕೇಳುವುದಿಲ್ಲವಲ್ಲ?
ನಿಜ ಹೇಳು, ಏನು ಮಾಡೋದಕ್ಕೆ ಹೊರಟಿದೀಯಾ?
ವಿ. ಹೇಮಂತಕುಮಾರ, ಬೆಂಗಳೂರು, 9025992900
ಹೆಣ್ಣಿನ ಮುಡಿಗೆ ಸೇರಬೇಕಾದ ಹೂವು ಗಿಡದಲ್ಲಿಯೇ ಇದೆಯಲ್ಲ?
ನಾವು ಸೃಷ್ಟಿಸಲಾರದ ಚೆಲುವಿಗೆ ನಮ್ಮಿಂದೇಕೆ ಸಾವು?
ಬಾಣಭಟ್ಟ