ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಎಪ್ಪತ್ತು ವರ್ಷದ ಮುದುಕ ಇಪ್ಪತ್ತು ವರ್ಷದ ಹುಡುಗಿಯನ್ನು ಮದುವೆಯಾದರೆ ಹೇಗಿರುತ್ತೆ?

Mainashree
Updated On : 7 Nov 2013, 10:36 am

ತಲವಾಟ ಮಂಜು, ಸಾಗರ, 9480931611
ಎಪ್ಪತ್ತು ವರ್ಷದ ಮುದುಕ ಇಪ್ಪತ್ತು ವರ್ಷದ ಹುಡುಗಿಯನ್ನು ಮದುವೆಯಾದರೆ ಹೇಗಿರುತ್ತೆ?
ಎಲ್ಲಾ ಇದ್ದ ಹಾಗೇ ಇರುತ್ತೆ!

ಫ್ಯಾಷನ್ ಡಿಸೈನರ್ ಮಧು, 9945737427
ದೇಹ ಸೌಂದರ್ಯವನ್ನು ಬಿಚ್ಚಿ ತೋರಿಸುವ ಸಿನಿಮಾ ನಟಿಯರು, ವಯಸ್ಸನ್ನು ಮಾತ್ರ ಮುಚ್ಚಿಡುತ್ತಾರಲ್ಲ ಯಾಕೆ?
ಅವರು ವಯಸ್ಸು ಮುಚ್ಚಿಟ್ಟಿದ್ದರಿಂದಲೇ ಬಿಚ್ಚಿಟ್ಟಿದ್ದಕ್ಕೆ ಬೆಲೆ!

ಕುತ್ಪಾಡಿ ಜಯಪ್ರಕಾಶ ಹೆಗ್ಡೆ, ತೀರ್ಥಹಳ್ಳಿ
ದೀಪಾವಳಿಗೆ ಪಟಾಕಿ ಹೊಡೆಯಬೇಡಿರೆಂದು ಜಾಹೀರಾತು ಕೊಟ್ಟ ಸರ್ಕಾರವೇ ತಾನು ಅಧಿಕಾರಕ್ಕೆ ಬಂದ ಕ್ಷಣ ಪಟಾಕಿ ಸಿಡಿಸಿಯೇ ಸಂಭ್ರಮಿಸಿತಲ್ಲಾ?
ಜಾಹೀರಾತಿನ ಕೆಳಗೆ 'ಎಲ್ಲಾ ಕಾನೂನುಗಳು ಜನರಿಗೆ ಮಾತ್ರ ಅನ್ವಯವಾಗುತ್ತವೆ' ಎಂಬ ವಿಶೇಷ ಸೂಚನೆ ಪ್ರಕಟಿಸಿದ್ದರೆ ಸರಿಯಾಗುತ್ತಿತ್ತು.

ಮುಗ್ಗಳ್ಳಿ ಗುರು, ಬನವಾಸಿ, 9480931442
ಶುಗರ್‌ಗೂ ಫಿಗರ್‌ಗೂ ಇರುವ ವ್ಯತ್ಯಾಸವೇನು?
ಶುಗರ್ ಹೆಚ್ಚಾದ್ರೆ ಕಷ್ಟ, ಫಿಗರ್ ಹಾಳಾದ್ರೆ ಕಷ್ಟ.

ರವಿಕುಮಾರ ಜಿ.ಬಿ. ಬೆಂಗಳೂರು, 9449669897
ಮದುವೆಯಾದ ಮಹಿಳೆಯರು ತಾಳಿ ಕುಂಕುಮ ಮರೆಯುತ್ತಿದ್ದಾರೆ ಏಕೆ?
ಗಂಡನನ್ನು ಮರೆಯದಿದ್ದರೆ ಸಾಕು ಮಾರಾಯಾ.


 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement