ಪ್ರೀತಿ- ಪ್ರೇಮದ ಗಾಡಿಯನ್ನು ಓಡಿಸಲು ಲೈಸೆನ್ಸ್ ಎಲ್ಲಿ ದೊರೆಯುತ್ತದೆ?
ಐಗೂರು ರವಿಪ್ರಿಯ, ಕೊಡಗು, 9483111096
ಪ್ರೀತಿ- ಪ್ರೇಮದ ಗಾಡಿಯನ್ನು ಓಡಿಸಲು ಲೈಸೆನ್ಸ್ ಎಲ್ಲಿ ದೊರೆಯುತ್ತದೆ?
ಅದಕ್ಕೆ ಲೈಸೆನ್ಸ್ ಬೇಕಿಲ್ಲ. ಆದರೆ ಅದರಿಂದ ಆಗಬಹುದಾದ ಪರಿಣಾಮಗಳಿಗೆ ನೀವೇ ಜವಾಬ್ದಾರರು!
ಬರ್ಕಲಿರಮೇಶ, ಕಿರಗಂದೂರು, ಮಂಡ್ಯ, 9008741348
ಹೆಣ್ಣು ಸಂಸಾರದ ಕಣ್ಣು. ಹಾಗಾದರೆ ಗಂಡು?
ಕಣ್ಣನ್ನು ರಕ್ಷಿಸುವ ರೆಪ್ಪೆ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಬಡತನವಿದ್ದಲ್ಲಿ ಪ್ರತಿಭೆ ಇರುತ್ತದೆ. ಸಿರಿತನವಿದ್ದಲ್ಲಿ?
ಪ್ರತಿಭೆಗೆ ಬಡತನವಿರುತ್ತದೆ!
ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಹಾಸಿಗೆಯಿದ್ದಷ್ಟು ಕಾಲುಚಾಚು ಅಂದ್ರೆ ಟೇಬಲ್ ಕೆಳಗೂ ಕೈಚಾಚುತ್ತಾನಲ್ಲಾ?
ಹಾಸಿಗೆಯಿದ್ದಷ್ಟು ಕಾಲುಚಾಚು, ಟೆಬಲ್ ಇದ್ದಷ್ಟು ಕೈಚಾಚು ಎಂತ ಹೊಸ ಗಾದೆ ಮಾಡಿಕೊಂಡಿರಬೇಕು.
ರಮೇಶ ಭಟ್ ಆವರ್ಸೆ, ಮೈಸೂರು, 9164276058
ಧೋನಿ ಕ್ರಿಕೆಟ್ ಮ್ಯಾಚ್‌ನಲ್ಲಿ ಸೋತ್ರೆ ಅವನ ಮನೆಗೆ ಕಲ್ಲುಹೊಡೆಯುವ ಜನ, ಭ್ರಷ್ಟಾಚಾರ ಮಾಡಿದ ರಾಜಕಾರಣಿಗಳ ಮನೆಗೆ ಹೋಗಿ ಯಾಕೆ ಕಲ್ಲು ಹೊಡೆಯಲ್ಲ?
ರಾಜಕಾರಣಿಗಳ ಹಾಗೆ ಧೋನಿ ತಿರುಗಿ ಕಲ್ಲು ಹೊಡೆಸಲ್ವಲ್ಲ ಅದಿಕ್ಕೆ.
ಬಾಣಭಟ್ಟ