ಕಚಗುಳಿ ಟ್ವೀಟ್ಸ್
ತಮ್ಮ ಪಾಕೆಟ್ ಮುಟ್ಟಿಕೊಂಡಾಗ ಅಲ್ಲಿ ಮೊಬೈಲ್ ಫೋನ್ ಇಲ್ಲದಿರುವುದು ತಿಳಿದಾಗ ಗಂಡಸರಿಗೆ ಸಣ್ಣಮಟ್ಟದ ಹೃದಯಾಘಾತವಾಗುತ್ತದೆ. ಆ ಆಘಾತ ದೊಡ್ಡಮಟ್ಟಕ್ಕೇರುವುದು ಅದನ್ನು ಹೆಂಡತಿಯ ಕೈಯಲ್ಲಿ ನೋಡಿದಾಗ.
-ರಿಯಾ
ಆಲೂ ಕೆಜಿಗೆ 50 ರುಪಾಯಿ, ಟೊಮೆಟೊ 80, ಈರುಳ್ಳಿ 70 ಹಾಗೂ ದೇಸಿ ತುಪ್ಪ ಕೆಜಿಗೆ 400 ರುಪಾಯಿ. ದೇಶವನ್ನು ಸ್ಲಿಮ್ ಮಾಡುವುದಕ್ಕೆ ಇದುವೇ ಒಳ್ಳೆಯ ಮಾರ್ಗ.
-ರಮಣ್ ಮಲಿಕ್
ಸದ್ಯ. ಗುವಾಹಟಿ ಹೈಕೋರ್ಟ್ ಸಿಐಡಿ ಸಂಸ್ಥೆ ಅಸಂವಿಧಾನಿಕ ಎಂದು ಹೇಳಲಿಲ್ಲ. ಹಿಂದಿ ಧಾರಾವಾಹಿಯ ಎಸಿಪಿ ಪ್ರದ್ಯುಮ್ನರ ಪ್ರಯತ್ನವೆಲ್ಲ ನೀರಾಗಿ ಹೋಗ್ತಿತ್ತು!
-ಫೇಕಿಂಗ್ ನ್ಯೂಸ್
ಮಕ್ಕಳೇ, ತುಂಬ ಗಂಭೀರವಾದ ಅಪರಾಧ ಮಾಡಬೇಡಿ. ರಾಮ್ ಜೇಠ್ಮಲಾನಿಗೆ ಆಗಲೇ 90 ವರ್ಷ ಆಗಿಹೋಯ್ತು. ನಿಮ್ಮನ್ನು ರಕ್ಷಿಸೋಕೆ ಯಾರೂ ಇರೋಲ್ಲ.
-ಮಿಲ್ಲರ್