ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ನಮ್ಮ ರಾಜಕಾರಣಿಗಳು ತಮ್ಮ ಮಕ್ಕಳನ್ನೇಕೆ ಸೇನೆಗೆ ಸೇರಿಸುವುದಿಲ್ಲ?

Rashmi Kasaragodu
Updated On : 10 Nov 2013, 11:36 am

ಪರಮ ನಾಸ್ತಿಕ, 9008888669
ನಮ್ಮ ರಾಜಕಾರಣಿಗಳು ತಮ್ಮ ಮಕ್ಕಳನ್ನೇಕೆ ಸೇನೆಗೆ ಸೇರಿಸುವುದಿಲ್ಲ?
ತಮ್ಮ ಖಾಸಗಿ ಸಾಮ್ರಾಜ್ಯದ ಗಡಿ ವಿಸ್ತರಣೆ ಕೆಲಸವನ್ನು ಅವರಿಗೇ ವಹಿಸಿರುವುದರಿಂದ!


ಮೂಗಳ್ಳಿ ಗುರು, ಬನವಾಸಿ 9480931442
ವಯಸ್ಸಾದ ನಟಿಯರು ರಾಜಕೀಯ ಸೇರಲು ಕಾರಣವೇನು?
ಪ್ರಧಾನ ಭೂಮಿಕೆ ಬಿಟ್ಟು ಪೋಷಕ ಪಾತ್ರ ನಿರ್ವಹಿಸುವಾಗ ರಾಜಕೀಯದಲ್ಲೇ ಫಾಯಿದೆ ಜಾಸ್ತಿ!


ಸಂತೇಬೆನ್ನೂರು ಫೈಜ್ನಟ್ರಾಜ್, ಸಂತೇಬೆನ್ನೂರು
ಪ್ರೀತಿಸಿದ ಮೇಲೆ ಮದ್ವೆಯಾಗೋದು ಕಡ್ಡಾಯಾನಾ?
ಸ್ವಲ್ಪ ಕಾದರೆ, ಸರ್ಕಾರವೇ ಆ ಕೆಲಸವನ್ನು ವಹಿಸಿಕೊಂಡರೂ ಆಶ್ಚರ್ಯವಿಲ್ಲ.


ದೇಶವಳ್ಳಿ ಶಿವು, ಚಾಮರಾಜನಗರ
ಕನಸುಗಳನ್ನು ಸೆರೆಹಿಡಿಯುವ ಕ್ಯಾಮರಾ ಬಂದ್ರೆ?
ಮುಂದಿನ ಚುನಾವಣೆಯಲ್ಲಿ ಅದನ್ನೇ ಪುಕ್ಕಟೆ ಕೊಡುವ ಭರವಸೆ.



ಕಲಾವಿದ ಸೀನು, 9538641164
ಮೀನಿನ ಹೆಜ್ಜೆ ಗುರುತು, ಹುಡುಗಿ ಮನಸ್ಸು ಕಂಡುಹಿಡಿಯೋದು ಅಸಾಧ್ಯವಂತೆ ಹೌದಾ?
ಮೀನು ಸಿಕ್ಕರೆ ಸಾಕು, ಹೆಜ್ಜೆ ಗುರುತು ಕಟ್ಕೊಂಡ್ ಏನು ಅಂತ!

ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement