ಕೋಲ್ಯ ತನ್ನ ಗರ್ಲ್ಫ್ರೆಂಡ್ ಜೊತೆ ಮಾತಾಡುತ್ತಾ ಕುಳಿತಿದ್ದ...
ಕೋಲ್ಯ ತನ್ನ ಗರ್ಲ್ಫ್ರೆಂಡ್ ಜೊತೆ ಮಾತಾಡುತ್ತಾ ಕುಳಿತಿದ್ದ.
ಗರ್ಲ್ಫ್ರೆಂಡ್(ಪ್ರೀತಿಯಿಂದ): ನಿನ್ನ ಹೆಂಡತಿ ಯಾವ ರೀತಿ ಇರಬೇಕು ಅಂತ ಬಯಸ್ತೀಯಾ?
ಕೋಲ್ಯ: ಮನೆ ಕೆಲಸ ಮಾಡೋಕ್ಕೆ ಬರಬೇಕು, ಹಿರಿಯರಿಗೆ ಗೌರವ ಕೊಡಬೇಕು, ನನ್ನ ಮಾತು ಮೀರಬಾರದು..ಹೆಂಡತಿ ಅಂದ್ರೆ ಹಂಗೆ ಇರ್ಬೇಕು!
ಗರ್ಲ್ಫ್ರೆಂಡ್: ಹಾಗಿದ್ರೆ ಒಂದು ಕೆಲಸ ಮಾಡು. ನನ್ನ ಮನೆ ಕೆಲಸದವಳನ್ನೇ ಮದುವೆ ಆಗಿಬಿಡು!
***
ಕೋಲ್ಯ ತನಗೆ ಎದುರಾದವರಿಗೆಲ್ಲ ಪ್ರಶ್ನೆ ಕೇಳತೊಡಗಿದ: ರಬ್ಬರ್ ಬ್ಯಾಂಡಿನಲ್ಲಿ ಸುತ್ತಿದ ಹಣದ ಕಟ್ಟು ಕಳೆದುಕೊಂಡಿದ್ದೀರಾ?
ಒಬ್ಬ ಹೇಳಿದ: ಹೌದು ಸರ್, ಆವಾಗಿಂದ ಹುಡುಕ್ತಾ ಇದೀನಿ...
ಕೋಲ್ಯ: ತುಂಬಾ ಲಕ್ಕಿ ಸರ್ ನೀವು. ತೊಗೊಳ್ಳಿ, ನನಗೆ ಆ ರಬ್ಬರ್ ಬ್ಯಾಂಡ್ ಸಿಕ್ಕಿದೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.