ಬಿಜೆಪಿಯವರು 'ಮೋದಿ' ಜಪ ಬಿಟ್ಟು ಬೇರೆ ಮಾತಾಡುತ್ತಿಲ್ಲ ಏಕೆ?
ರವಿಕುಮಾರ್ ಜಿ.ಬಿ. 9449669897
ಬಿಜೆಪಿಯವರು 'ಮೋದಿ' ಜಪ ಬಿಟ್ಟು ಬೇರೆ ಮಾತಾಡುತ್ತಿಲ್ಲ ಏಕೆ?
ಬೇರ್ಯಾವ ಮೋಡಿಯೂ ಅವರ ಬಳಿ ಇಲ್ಲವಾದ್ದರಿಂದ.
ರಮೇಶ್ಭಟ್ ಆವರ್ಸೆ, 9164276058
ಕೆಲವು ಸಿಟಿಬಸ್ಸುಗಳಲ್ಲಿ ಡ್ರೈವರ್ರೇ ಟಿಕೆಟ್ ಕೊಡ್ತಾರಲ್ಲ ಬಾಣಭಟ್ರೆ?
ಕೆಲ ಲಕ್ಸುರಿ ಬಸ್ಸುಗಳ ಡ್ರೈವರ್ಗಳು ಪ್ರಯಾಣಿಕರೆಲ್ಲನಿದ್ರೆಯಲ್ಲಿರುವಾಗಲೇ ಟಿಕೆಟ್ ಕೊಡುತ್ತಿರುವ ರೀತಿಗೆ ಹೋಲಿಸಿದರೆ ಇದು ಎಷ್ಟೋ ವಾಸಿ!
ಫ್ಯಾಷನ್ ಡಿಸೈನರ್ ಮಧು, 9945737427
ಮೊದಲ ಪ್ರೇಮದ ಮೊದಲ ಸ್ಪರ್ಶದಲ್ಲಾಗುವ ರೋಮಾಂಚನ ಎರಡನೇ ಪ್ರೇಮದಲ್ಲಿ ಆಗುವುದಿಲ್ಲವಂತೆ?
ಇದನ್ನು ಖಾತ್ರಿ ಮಾಡಿಕೊಳ್ಳುವುದಕ್ಕೆಂದೇ ಕೆಲವರು ಹೆಚ್ಚು ಬಾರಿ ಪ್ರೀತಿಸುತ್ತಾರೆ.
ಅಶೋಕ್ 8892320820
ನಮ್ಮ ನಾಡಲ್ಲೇ ಇಷ್ಟೊಂದು ದೇವರುಗಳಿದ್ರೂ ತಿರುಪತಿ ತಿಮ್ಮಪ್ಪನ ನೋಡೋಕೆ ಜನ ಮುಗಿಬೀಳೋದ್ಯಾಕೆ?
ಅದು ದೂರದ ಬೆಟ್ಟ ಅಲ್ವಾ, 'ನುಣ್ಣಗೆ' ಕಾಣ್ತಿರಬಹುದು!
ಸಂಗಮೇಶ್ ಯಡ್ರಾಮಿ, 7259434853
ದೇವರು ಮೊಟ್ಟಮೊದಲು ಸೃಷ್ಟಿ ಮಾಡಿದ ಪದ ಯಾವುದು?
ಉಸ್ಸಪ್ಪಾ ಅಂತಿರಬೇಕು!
-ಬಾಣಭಟ್ಟ