ಕಾವಿ ತೊಟ್ಟವರೂ ಕ್ಯಾಬರೆ ಹಾಡಿಗೆ ಡ್ಯಾನ್ಸ್ ಮಾಡಿದರೆ?
ಓಂ ಚೆನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ 9900739725
ಕಾವಿ ತೊಟ್ಟವರೂ ಕ್ಯಾಬರೆ ಹಾಡಿಗೆ ಡ್ಯಾನ್ಸ್ ಮಾಡಿದರೆ?
ತಮ್ಮ ನಿಜ ಪರಿಚಯ ಹೇಳಿಕೊಂಡಂತಾಗುತ್ತೆ.
ಆರ್. ಮಧುಸೂಧನ್, 9945737427
ಹೃದಯದ ಬಾಗಿಲನ್ನು ತಟ್ಟಿದ ಚೆಲುವೆ, ಬಾಗಿಲು ತೆರೆದಾಗ ಒಳಬರಲೇ ಇಲ್ಲವಲ್ಲ?
ಬಾಗಿಲು ತಟ್ಟಿದವರೆಲ್ಲಾ ಒಳಬರುವ ಇರಾದೆ ಹೊಂದಿರುವುದಿಲ್ಲ.
ಚಿರಪ್ರಭೆ ನಂಜನಗೂಡು, 8553793107
ಖ್ಯಾತ ಅರ್ಥಶಾಸ್ತ್ರಜ್ಞರೇ ಪ್ರಧಾನಿಯಾಗಿದ್ದರೂ ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತಿದೆಯಲ್ಲಾ?
ಅವರು ಅರ್ಥದ ಬಗ್ಗೆ ಯೋಚಿಸುವ ಹಂತ ದಾಟಿ ಮೋಕ್ಷದಲ್ಲಿ ಆಸಕ್ತಿ ಹೊಂದಿರಬಹುದು.
ವಿ. ಹೇಮಂತಕುಮಾರ 9035992900
ಈಗಿಂದೀಗ್ಲೆ ಊರುಬಿಟ್ಟು ಎಲ್ಲಾದ್ರೂ ದೂರ ಓಡಿ ಹೋಗೋಣ ಅಂತಿದಾಳಲ್ಲ?
ದೂರ ಓಡೋಕಾಗಲ್ಲ. ಬಸ್ಸಿಗೋ ಆಟೋಕ್ಕೋ ಹೋಗೋಣ ಅಂತ ಕನ್ವಿನ್ಸ್ ಮಾಡಿ.
ಕೆ. ಎಂ. ಲಿಂಗರಾಜು, ನಂಜನಗೂಡು, 9916021365
ಮೊಬೈಲ್ ಯುಗದಲ್ಲೂ ಮೌನವಾಗಿರುವವರನ್ನು ಏನೆಂದು ಕರೆಯಬೇಕು?
ಸೈಲೆಂಟ್ ಮೂಡಿಗರು!
ಬಾಣಭಟ್ಟ