ಬಿ.ಎಡ್ ವ್ಯಾಸಂಗ ಸ್ವಂತ ಊರಿನಲ್ಲಿರಲಿ
ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಆಯ್ಕೆ ಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಯಿತು. ಅದರಿಂಗಾಗಿ ಸುಮಾರು 2500 ಪ್ರತಿಭಾವಂತರು ಯಾವುದೇ ವಶೀಲೀ ಅಗತ್ಯವಿಲ್ಲದೆ ಉಪನ್ಯಾಸಕ ಹುದ್ದೆಯನ್ನು ಪಡೆದರು. ಇವರ ನೇಮಕಾತಿ ಆದೇಶ ಪತ್ರದಲ್ಲಿ ಎರಡು ವರ್ಷ ಪರೀಕ್ಷಾರ್ಥ ಸೇವಾವಧಿ ಎಂದು ತಿಳಿಸಲಾಗಿತ್ತು ಮತ್ತು ನಾಲ್ಕು ವರ್ಷದ ಒಳಗಡೆಗೆ ಬಿಎಡ್ ಪದವಿಯನ್ನು ಗಳಿಸಬೇಕು ಎಂದು ತಿಳಿಸಲಾಗಿತ್ತು. ಅನೇಕರು ಆ ಮೊದಲೇ ಈ ಪದವಿಯನ್ನು ಹೊಂದಿದ್ದು ಅವರನ್ನು ಎರಡುವರ್ಷಗಳ ನಂತರ ಅವರ ಪರೀಕ್ಷಾರ್ಥ ಸೇವಾವಧಿಯನ್ನು ತೃಪ್ತಿಕರ ಎಂದು ಘೋಷಣೆ ಮಾಡಿದ್ದು ಅವರುಗಳಿಗೆ ಬೇಕಾದ ಕಡೆ ವರ್ಗಾವಣೆ ಕೂಡ ಸಿಕ್ಕಿತು .ಆದರೆ ಬಿಎಡ್ ಪದವಿ ಇಲ್ಲದ 1359 ಮಂದಿಗೆ ಸೇವಾವಧಿ ಘೋಷಣೆ ಮಾಡಿಲ್ಲ ಮತ್ತು ವರ್ಗಾವಣೆ ,ಇನ್ಕ್ರಿಮೆಂಟ್ಗಳನ್ನು ತಡೆಹಿಡಿಯಲಾಗಿದೆ. ಇವರಲ್ಲಿ ಹೆಚ್ಚಿನವರು ಎಂ.ಫಿಲ್. , ಪಿಎಚ್.ಡಿ ಪದವಿಗಳನ್ನು ಪಡೆದವರಿದ್ದಾರೆ. ಎರಡನೆಯ ಡಾಕ್ಟರೇಟ್ ಪದವಿಯನ್ನು ಪಡೆದವರೂ ಇದ್ದಾರೆ
ಇದೀಗ ಇವರಿಗೆ ವೇತನ ಸಹಿತ ರಜೆ ನೀಡಿ ಬಿ.ಎಡ್. ಮಾಡಲು ಅನುಮತಿ ನೀಡಿದ್ದು ಅವರು ಕೆಲಸ ಮಾಡುತ್ತಿರುವ ಜಿಲ್ಲೆಯಲ್ಲಿಯೇ ಇರುವ ಬಿ.ಎಡ್. ಕಾಲೇಜ್ಗಳಲ್ಲಿಯೇ ಬಿ.ಎಡ್. ಮಾಡಬೇಕೆಂದು ಸೂಚಿಸಿದ್ದಾರೆ. ಹೆಚ್ಚಿನ ಕಡೆ ಇವರು ಕೆಲಸ ಮಾಡುವ ಸ್ಥಳದ ಸಮೀಪ ಇಂಥ ಕಾಲೇಜ್ ಇಲ್ಲದೆ ಇರುವುದರಿಂದ ಇವರು ಎಲ್ಲೋ ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ಓದಬೇಕಾಗಿದೆ. ವಲಯದಲ್ಲಿ ಕೆಲಸ ಮಾಡಬೇಕೆಂಬ ಕಾರಣಕ್ಕೆ ಇವರಿಗೆ ಯಾರಿಗೂ ಅವರವರ ಸ್ವಂತ ಉರಿನಲ್ಲಿ ಕೆಲಸ ದೊರೆತಿಲ್ಲ. ಮನೆ ಮಂದಿಯನ್ನು ಸ್ವಂತ ಊರಲ್ಲೇ ಬಿಟ್ಟು ಬಾಡಿಗೆ ಮನೆ ಮಾಡಿಕೊಂಡು ಹಳ್ಳಿಗಳಲ್ಲಿ ಈ ಉಪನ್ಯಾಸಕರು ಇದ್ದಾರೆ.
ಮನೆ ಮಂದಿಗೋಸ್ಕರ ಸ್ವಂತ ಜಿಲ್ಲೆಯಲ್ಲಿ ಒಂದು ಮನೆಗೆ ಬಾಡಿಗೆ ,ಕೆಲಸ ಮಾಡುವಲ್ಲಿ ಮತ್ತೊಂದು ಮನೆ ಬಾಡಿಗೆ, ಓದುವಲ್ಲಿ ಇನ್ನೊಂದು ಮನೆ ಅಥವಾ ಹಾಸ್ಟೆಲ್ ಬಾಡಿಗೆ... ಏನು ಅವಸ್ಥೆ ಇವರದು? ಮಹಿಳಾ ಉಪನ್ಯಾಸಕರಿಗೆ ಇದರಿಂದ ತುಂಬಾ ತೊಂದರೆ ಆಗಿದೆ. ಚಿಕ್ಕ ಮಕ್ಕಳಿರುವ ಉಪನ್ಯಾಸಕ ತಾಯಂದಿರು ಏನು ಮಾಡಬೇಕು? ಈಗಾಗಲೇ ನಲುವತ್ತು ವರ್ಷ ದಾಟಿರುವ, ಎಂಫಿಲ್ , ಪಿಎಚ್.ಡಿ ಯಂತಹ ಉನ್ನತ ಪದವಿ ಅರ್ಹತೆಗಳನ್ನು ಪಡೆದ ಇವರಿಗೆ ಈಗ ಎಳೆಯ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ಓದುವುದೇ ಒಂದು ಸವಾಲು. ಅದರೊಂದಿಗೆ ಸ್ವಂತ ಜಿಲ್ಲೆಯಲ್ಲಿ ಅವಕಾಶ ನೀಡದೆ ಇದ್ದರೆ ಇನ್ನಷ್ಟು ಸಮಸ್ಯೆಗಳು. ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಿ ಈ ಉಪನ್ಯಾಸಕರಿಗೆ ಅವರ ಸ್ವಂತ ಜಿಲ್ಲೆ ಅಥವಾ ಕೆಲಸ ಮಾಡುವ ಜಿಲ್ಲೆಗಳಲ್ಲಿ ಬಿ.ಎಡ್. ಮಾಡಲು ಅನುಮತಿ ನೀಡಬೇಕಾಗಿ ವಿನಂತಿ.
-ನೊಂದ ಉಪನ್ಯಾಸಕರು
ವಯೋವುತಿ ಹೆಚ್ಚಿಸಿ
ಗೃಹ ಸಚಿವರಾದ ಕೆ.ಜೆ. ಜಾರ್ಜ್ರವರು ರಾಜ್ಯದಲ್ಲಿ 900 ಪಿಎಸ್ಐ ಹುದ್ದೆಗಳು ಖಾಲಿ ಇರುವುದಾಗಿ ತಿಳಿಸಿದ್ದು, ಇನ್ನೂವರೆಗೂ ಪಿಎಸ್ಐ ಹುದ್ದೆ ಭರ್ತಿಗೆ ಪ್ರಕ್ರಿಯೆ ನಡೆದಿಲ್ಲ. 2001ರಿಂದ 2009ರವರೆಗೆ 2 ವರ್ಷಕ್ಕೊಮ್ಮೆ ಪಿಎಸ್ಐ ಹುದ್ದೆ ಭರ್ತಿ ಮಾಡಿದ್ದು 2009ರಿಂದ ಇಲ್ಲಿಯವರೆಗೂ ಐದು ವರ್ಷ ಕಳೆದರೂ ನೇಮಕಾತಿ ನಡೆದಿಲ್ಲ. ಹೀಗಿರುವಾಗ ಪಿಎಸ್ಐ ಹುದ್ದೆ ಆಕಾಂಕ್ಷಿಗಳ ವಯೋವುತಿ ಮೀರಿ ಪಶ್ಚಾತ್ತಾಪ ಪಡುತ್ತಿದ್ದಾರೆ. ಮಹಾರಾಷ್ಟ್ರ, ಆಂಧ್ರ, ಬಿಹಾರದಲ್ಲಿ 32 ವರ್ಷ, ಕೇರಳದಲ್ಲಿ 30 ವರ್ಷ ವಯೋವುತಿ ಇರುವಾಗ ಕರ್ನಾಟಕದಲ್ಲೂ (26) ವಯೋವುತಿ ಸಡಿಲಗೊಳಿಸಿ ಸರ್ಕಾರ ಪಿಎಸ್ಐ ಆಕಾಂಕ್ಷಿಗಳ ಬಾಳಿಗೆ ಆಶಾಕಿರಣವಾಗಬೇಕಿದೆ.
-ಕಿರಣ್ಕುಮಾರ್ ಅರಮನೆ, ಶಿರಹಟ್ಟಿ
ಗ್ಲಾಸ್ ಹೌಸ್ ರಕ್ಷಿಸಿ
ಹುಬ್ಬಳ್ಳಿ ನಗರದ ಐತಿಹಾಸಿಕ ಇಂದಿರಾ ಗಾಜಿನ ಮನೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಗ್ಲಾಸ್ ಹೌಸ್ನಲ್ಲಿ ರಾತ್ರಿ ಮದ್ಯಪಾನ, ಜೂಜು ತಾಂಡವವಾಡುತ್ತಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಪ್ಲಾಸ್ಟಿಕ್ ಕವರ್ಗಳು ಕಂಡು ಬರುತ್ತಿವೆ. ನಿತ್ಯ ಸಾವಿರಾರು ಜನ ವಾಯುವಿಹಾರಕ್ಕೆ ಬರುತ್ತಾರೆ. ಗ್ಲಾಸ್ಹೌಸ್ನ ಈ ಸ್ಥಿತಿ ನೋಡಿ ಎಲ್ಲರೂ ಮುಜುಗರ ಪಡುವ ಸ್ಥಿತಿ ಉಂಟಾಗಿದೆ. ಮಹಾನಗರಪಾಲಿಕೆ ಆದಷ್ಟು ಬೇಗ ಎಚ್ಚೆತ್ತು ಗ್ಲಾಸ್ಹೌಸ್ನ ರಕ್ಷಣೆ ಮಾಡಬೇಕಿದೆ.
-ಪಾರ್ವತಿದೇವಿ ಬಿಡನಾಳ, ಹುಬ್ಬಳ್ಳಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com