ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮುಪ್ಪಿನಲ್ಲಿ ಯೌವನವನ್ನು ಮರಳಿ ಪಡೆಯುವಂತಿದ್ದರೆ ಹೇಗಿರುತ್ತಿತ್ತು?

Mainashree
Updated On : 29 Nov 2013, 9:57 am

ಹರಳಹಳ್ಳಿ ಪುಟ್ಟರಾಜು ಪಾಂಡವಪುರ, 9632838088
ಮುಪ್ಪಿನಲ್ಲಿ ಯೌವನವನ್ನು ಮರಳಿ ಪಡೆಯುವಂತಿದ್ದರೆ ಹೇಗಿರುತ್ತಿತ್ತು?
ಅರವತ್ತಕ್ಕೆ ಮತ್ತೆ 'ಅರಳುತ್ತಿದ್ದರು'!

ಕೆ.ಎನ್. ನಾರಾಯಣರೆಡ್ಡಿ, ಕೆ.ಜಿ. ಎಫ್
ಸುಲಭವಾಗಿ ಹಣ ಸಂಪಾದಿಸುವ ಮಾರ್ಗ ಯಾವುದು?
ಯಾವುದಾದರೂ ಮಾರ್ಗಕ್ಕೆ ಟಾರ್ ಹಾಕುವ ಕಾಂಟ್ರಾಕ್ಟರ್ ಆಗುವುದು!

ವಿ. ಹೇಮಂತ ಕುಮಾರ್, ಬೆಂಗಳೂರು, 9035992900
ಭಾವಜೀವಿಗೂ ಬುದ್ಧಿಜೀವಿಗೂ ವ್ಯತ್ಯಾಸವೇನು?
ಭಾವಜೀವಿ ಹಾರುತ್ತಾನೆ, ಬುದ್ಧಿಜೀವಿ ಹೇರುತ್ತಾನೆ!

ಹೇಮಂತ ಕುಮಾರ್
ನನ್ನವಳ ನಡಿಗೆಯೇ ನರ್ತನದಂತಿದೆಯಲ್ಲ?
ಸಮಾಧಾನಪಡಿ. ನರ್ತನ ನಡಿಗೆಯಂತಿಲ್ಲವಲ್ಲ!

ಎಂ. ನಾಗರಾಜ್, 9900538954
ಹುಡುಗರು ಹುಡುಗಿಯರ ಬಟ್ಟೆಯನ್ನೇ ನೋಡುವುದರ ಹಿನ್ನೆಲೆ ಏನಿರಬಹುದು?
ಬಟ್ಟೆ ಮಾತ್ರ ಚೆನ್ನಾಗಿರಬೇಕು!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement