20-20 ಸೂಪರ್ ಬ್ಯಾಟಿಂಗ್
ಕನ್ನಡಪ್ರಭ ದಿನಪತ್ರಿಕೆಯು ಪ್ರತಿನಿತ್ಯ ಹಲವು ವೈಶಿಷ್ಟ್ಯಗಳ ಸುದ್ದಿ ಹೊತ್ತು ತರುತ್ತಿರುವುದು ಹಾಗೂ ಪತ್ರಿಕೆಯ ಓದುಗರಿಗೆ ಜ್ಞಾನವನ್ನು ಹೆಚ್ಚಿಸುವಂತಹ ಹಲವಾರು ಅಂಕಣಗಳನ್ನು ಜನತೆಗೆ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಮ್ಮ ರಾಜ್ಯದ ಜನತೆ ತಮ್ಮ ದುಃಖ ದುಮ್ಮಾನಗಳನ್ನು ಪ್ರಜಾಪ್ರತಿನಿಧಿಗಳಲ್ಲಿ ಹೇಳಿಕೊಳ್ಳುವುದಕ್ಕಾಗಿಯೇ ಒಂದು ಅಂಕಣ ಮೀಸಲಿರಿಸಿ ಪ್ರಜಾಪ್ರತಿನಿಧಿಗಳು ಅದಕ್ಕೆ ಸ್ಪಂದಿಸಿ, ಸಮಸ್ಯೆಗಳನ್ನು ಪರಿಹರಿಸುವಂತಾದರೆ ರಾಜ್ಯದ ಜನತೆ ತಮ್ಮ ಪತ್ರಿಕೆಗೆ ಸದಾಕಾಲವೂ ಆಭಾರಿಯಾಗಿರುತ್ತಾರೆ. "ರಾಜಕಾರಣಿಗಳೇ ಜನತೆಗೆ ನೀವೇನು ಮಾಡುವಿರಿ?" ಎಂಬ ಶೀರ್ಷಿಕೆಯನ್ನು ಕೊಟ್ಟರೆ ಒಳಿತು.
- ಸಿ.ಕೆ. ರಘುನಾಥ್ಸಿಂಗ್, ಮಾಲೂರು ತಾ., ಮೊ. 9886 511792.
ಭಾನುವಾರದ ಕನ್ನಡಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗುವ 'ಕಾನೂನು ಸಲಹೆ' ಅಂಕಣ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ನೊಂದವರಿಗೆ ಮತ್ತು ಕಾನೂನು ಗೊತ್ತಿಲ್ಲದವರಿಗೆ ಕಾನೂನು ಸಲಹೆಗಾರರಾದ ಎಚ್.ಆರ್. ಕಸ್ತೂರಿರಂಗನ್ರವರು ತುಂಬಾ ಅಚ್ಚುಕಟ್ಟಾಗಿ ಮತ್ತು ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸಲಹೆ ನೀಡುತ್ತಾರೆ. ಆದ್ದರಿಂದ ಈ ಪತ್ರಿಕೆ ಎಲ್ಲಾ ಪತ್ರಿಕೆಗಳಿಗಿಂತ ಭಿನ್ನವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡಪ್ರಭ ಪತ್ರಿಕೆಗೆ ಮತ್ತು ಸಂಪಾದಕರಿಗೆ ಅನನ್ಯ ವಂದನೆಗಳು.
-ಕೃಷ್ಣಯ್ಯ ಕೆ.ವಿ., ಹಾರೋಹಳ್ಳಿ, ಮೊ.99861 36117
ಪ್ರತಿ ಭಾನುವಾರ ಪ್ರಕಟವಾಗುತ್ತಿರುವ ಗೋಡೆಬರಹ "ಪಾಕ್ಷಿಕ"ವಾಗುತ್ತಿದೆಯೇ? ಏಕೆಂದರೆ ನವೆಂಬರ್ 3ರ ಭಾನುವಾರ ಪತ್ರಿಕಾ ಕಚೇರಿಗೆ ರಜೆ, 17ರ ಸಂಚಿಕೆಯಲ್ಲಿ ಗೋಡೆಬರಹ ನಾಪತ್ತೆ...! ಏಕೆ ಹೀಗಾಯ್ತು? ಪತ್ರಗಳ ಅಭಾವವೇ? ನಮ್ಮನ್ನು ಬಹುವಾಗಿ ಆಕರ್ಷಿಸುವ 'ಗೋಡೆಬರಹ' ಪ್ರತಿ ವಾರ ಕನ್ನಡಪ್ರಭ ಎಂಬ ಗೋಡೆಯನ್ನು ಅಲಂಕರಿಸುತ್ತಿರಲಿ.
-ಬೆಳ್ಳಾವೆ ರಮೇಶ್, ಬನಶಂಕರಿ, 3ನೇ ಹಂತ., ಬೆಂಗಳೂರು-85
ತಾ. 23.11.13ರ ಡ್ಯಾನಿ ಪಿರೇರಾರ ಲೇಖನ ಗಮನ ಸೆಳೆಯಿತು. ಮರುಳಸಿದ್ದಪ್ಪನಂಥವರ ಭಾಷಣಗಳು, ಬರವಣಿಗೆಗಳು ರಾಜ್ಯದ ಯಾರನ್ನೂ ಮರಳು ಮಾಡಲು ಸಾಧ್ಯವಿಲ್ಲ ಬಿಡಿ. ಈ ಬಗ್ಗೆ ನಿಮ್ಮ ಲೇಖನ ಈ ತರಹದ ವಿವೇಕರಹಿತರಿಗೆ ಚಾಟಿ ಏಟು ನೀಡಿದಂತಿದೆ. ಈ ತರಹದ ಚಟಗಳನ್ನು ಸಮಾಜ ಪರಿಗಣಿಸದು. ಆ ದಿನಗಳು ಎಂದೋ ಮುಗಿದಿವೆ. ಉತ್ತಮ ವಿವರಣೆಗಳಿಂದ ಕೂಡಿದ ನಿಮ್ಮ ಬರಹಕ್ಕೆ ಧನ್ಯವಾದಗಳು.
- ಬಿ.ಎಚ್. ರಾಮಚಂದ್ರ, ಬೆಂಗಳೂರು., ಮೊ. 944 835 5945
ದಿ. 24 ನವೆಂಬರ್ 2013ನೇ '20 ನಿಮಿಷ 20 ಸುದ್ದಿ' ವಿನೂತನ ಪ್ರಯತ್ನ ಶ್ಲಾಘನೀಯ. ಇದನ್ನು ಪ್ರತಿ ದಿನಕ್ಕೆ ವಿಸ್ತರಿಸಿದಲ್ಲಿ ಪ್ರಶಂಸನೀಯ. ಅದು ಅಸಾಧ್ಯವೆಂದು ಓದುಗರಿಗೆ ಗೊತ್ತು. ಆದರೆ ಮುಖ್ಯಾಂಶಗಳಡಿಯಲ್ಲಿ, ಆ ಮಾದರಿಯಲ್ಲಿ ಓದುಗರಿಗೆ ತಿಳಿಸಬಹುದು. ಸಂಪಾದಕರು ಈ ನಿಟ್ಟಿನಲ್ಲಿ ಚಿಂತಿಸಬೇಕು.
- ಪವನಕುಮಾರ. ಕೆ.ವಿ., ಗಾಂಧಿನಗರ, ಬಳ್ಳಾರಿ
ಭಾನುವಾರ ಪತ್ರಿಕೆ ಸಿಕ್ಕ ತಕ್ಷಣ 'ಉಲ್ಟಾಪಲ್ಟಾ' ನೋಡಿ ಆಶ್ಚರ್ಯವಾಯಿತು. 'ಭಾರತರತ್ನ' ಮುಖಪುಟ ಇಷ್ಟವಾಯಿತು. ಅದೇ ರೀತಿ 20/20 ಪಟ ಪಟ ಸುದ್ದಿ ನಿಜವಾಗಲೂ ಇಷ್ಟವಾಯಿತು. ಭಲೆ, ಕನ್ನಡಪ್ರಭ ಕನ್ನಡಿಗರಿಗೆ ವಿಶೇಷ ಊಟ ಬಡಿಸ್ತಾ ಇದೆ.
- ವೇದಮೂರ್ತಿ ಮದ್ದೇರು, ಚಿತ್ರದುರ್ಗ (ಗಾರೇಹಳ್ಳಿ)
ದಿ. 24.11.2013ರ ಭಾನುವಾರದ ಕ.ಪ್ರ. ಸಾಪ್ತಾಹಿಕಪ್ರಭದಲ್ಲಿ 'ಮೇಲು ಕೀಳು' ತಲೆಬರಹದಲ್ಲಿ "ಪುರುಷರ ದಿನಾಚರಣೆ ಗೊತ್ತಾ?" ಎಂಬ ಲೇಖನ ಓದಿ ಅಚ್ಚರಿ ಹಾಗೂ ಅತೀವ ಸಂತೋಷ ಒಮ್ಮೆಲೆ ಉಂಟಾಯಿತು. ವರ್ಷವಿಡೀ ನಾನಾ ರೀತಿಯ ದಿನಾಚರಣೆಗಳನ್ನು ಆಚರಿಸುವ ಸುದ್ದಿಗಳು ಪತ್ರಿಕೆಗಳಲ್ಲಿ ಮತ್ತು ಟಿ.ವಿ. ಮಾಧ್ಯಮಗಳಲ್ಲಿ ಪ್ರಚಾರ ಆಗುತ್ತಲೇ ಇರುತ್ತವೆ. ಹೀಗೆ ನವೆಂಬರ್ 19ರಂದು ಪುರುಷರ ದಿನಾಚರಣೆ ಕೂಡ ದೇಶ ವಿದೇಶಗಳಲ್ಲಿ ನಡೆಯುತ್ತಿದೆ ಎಂಬ ಸಂಗತಿ ಕ.ಪ್ರ. ಪತ್ರಿಕೆಯ ಮೂಲಕ ಇದೇ ಪ್ರಪ್ರಥಮ ಬಾರಿಗೆ ಓದಿ ನಿಜಕ್ಕೂ ಅಚ್ಚರಿಯಾಯಿತು.
-ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, ಮೊ. 94491-30531
ಭಾನುವಾರದ 20-20 ಪ್ರಯೋಗ 'ನೋಡ್ತಾ ಇರಿ. ಏನೇನ್ ಮಾಡ್ತೀವಿ' ಎನ್ನುವುದರ ಪ್ರತ್ಯಕ್ಷ ನಿದರ್ಶನ. ಸಂಡೇ ಶೆಡ್ಯೂಲಿನಲ್ಲಿರುವವರಿಗೂ ಋ್ಡಟಟ ಢ್ಝಜಢಿ ಛಡಿ ಛ ್ಜಟಛಟ್ಛಿಜ ಅವಕಾಶ! ನಿಮ್ಮೀ ವಿನೂತನ ಪ್ರಯೋಗಕ್ಕೆ ಸೈ ಎನ್ನದೆ ಬೇರೆ ದಾರಿ ಉಳಿಯದು. ಮುಖಪುಟವನ್ನೇ ಬಳಸಿಕೊಳ್ಳುವುದರಿಂದ, ಸುದ್ದಿಗಳು ರಾಷ್ಟ್ರೀಯ -ಅಂತಾರಾಷ್ಟ್ರೀಯ ವಿಷಯಗಳ ನಂತರ ರಾಜ್ಯಕ್ಕೆ ಬಂದರೆ ಇನ್ನೂ ಒಳಿತಾಗುತ್ತಿತ್ತು.
- ಶಂಕರನಾರಾಯಣ ಭಟ್, ಹೊನ್ನಾವರ., ಮೊ. 9632 821920
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.