ಕಚಗುಳಿ ಟ್ವೀಟ್ಸ್
ಬಿಜೆಪಿ ಸಂಘಟನೆಯನ್ನು ಹೀಗೆ ವಿವರಿಸಬಹುದು. ವಾಜಪೇಯಿ ಅವರು ಹೃದಯವಿದ್ದಂತೆ. ನರೇಂದ್ರ ಮೋದಿ-ತಲೆ, ಆಡ್ವಾಣಿ- ಅಪೆಂಡಿಕ್ಸ್, ಅರುಣ್ ಜೇಟ್ಲಿ-ಬಾಯಿ, ನಿತಿನ್ ಗಡ್ಕರಿ-ಹೊಟ್ಟೆ, ವಿಜಯ್ ಜಾಲಿ- ಮಸಿ ಮುಖ!
- ರಮೇಶ್ ಶ್ರೀವತ್ಸ
ಒತ್ತಡದಿಂದ ದೇಹತೂಕ ಇಳಿಕೆಯಾಗುತ್ತ ಹೋಗುತ್ತದೆ ಎನ್ನುತ್ತಾರೆ. ಆ ಲೆಕ್ಕದಲ್ಲಿ ನಾನು ಈಗಾಗಲೇ ಅದೃಶ್ಯನಾಗಬೇಕಿತ್ತು!
- ಅರಾಮ್ಕೋರ
ಅಸಾರಾಮ್ ಮತ್ತು ತೇಜ್ಪಾಲ್ ಪ್ರಕರಣಗಳಿಂದ ಕಲಿಯಬಹುದಾದದ್ದು- ಹೊಳೆಯುವುದೆಲ್ಲ ಬಂಗಾರವಲ್ಲ, ಗಡ್ಡ ಬೆಳ್ಳಗಿದೆ ಎಂದ ಮಾತ್ರಕ್ಕೆ ಅವರು ಅಜ್ಜಂದಿರಲ್ಲ!
- ದ ಫಿಂಗರ್