ಅದೇ ಮಂಚ, ಅದೇ ಹಾಸಿಗೆ ಅಂತ ನನ್ನವಳು ಬೇಸರ ಪಡುತ್ತಿದ್ದಾಳಲ್ಲ?
ವಿ. ಹೇಮಂತಕುಮಾರ, ಬೆಂಗಳೂರು, 9035992900
ಅದೇ ಮಂಚ, ಅದೇ ಹಾಸಿಗೆ ಅಂತ ನನ್ನವಳು ಬೇಸರ ಪಡುತ್ತಿದ್ದಾಳಲ್ಲ?
ಅದೇ ಗಂಡ ಎಂದು ಹೇಳುವ ಮೊದಲು ಎಚ್ಚೆತ್ತುಕೋ.
ಚಿರಪ್ರಭ ನಂಜನಗೂಡು, 8553793107
ಗಂಗೆಯ ಪಾವಿತ್ರ್ಯವನ್ನು ನಂಬದವರು ಕಾಂಗ್ರೆಸ್‌ಬತ್ತಲಾರದ ಪಾವನಗಂಗೆ ಎನ್ನುತ್ತಿದ್ದಾರಲ್ಲ?
ಕಾಂಗ್ರೆಸ್‌ನ ಪಾವಿತ್ರ್ಯವನ್ನೂ ನಂಬುವುದಿಲ್ಲ ಎಂಬ ಒಳಾರ್ಥವಿರಬಹುದು!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಬುದ್ದಿಜೀವಿಗಳೆಂಬ ಭ್ರಮೆಯಲ್ಲಿರುವವರನ್ನು ಬುದ್ದಿಜೀವಿಗಳೆಂದು ಕರೆದವರು ಯಾರು?
ಅದು ಅವರೇ ಇಟ್ಟುಕೊಂಡ ಮತ್ತು ಪರಸ್ಪರ ಕೊಟ್ಟುಕೊಂಡ ಹೆಸರು.
ಕಾರೇಕುರ ಅಶೋಕ, 8892320820
ಹೆಣ್ಣು ಮಕ್ಕಳಿಗೆ ಪ್ರಾಣಕೊಡೋ ತಾಯಂದಿರು ಸೊಸೆಯರ ಕಂಡರೆ ಉರಿದು ಬೀಳ್ತಾರಲ್ಲ ಯಾಕೆ?
ಅಮ್ಮ ಹೇಳಿದ್ರೆ ಎಗರಾಡೋ ಗಂಡಸರು, ಹೆಂಡ್ತಿ ಹೇಳಿದ್ರೆ ಸುಮ್ನಿರ್ತಾರಲ್ಲ ಅದಕ್ಕೆ.
ರವಿಕುಮಾರ ಜಿ.ಬಿ. 9449669897
ಕೆಲವು ಸಾಹಿತಿಗಳು ತಿಕ್ಕಲ ಹೇಳಿಕೆಗಳನ್ನು ನೀಡುತ್ತಾರೆ ಏಕೆ?
ಅವರು ಮೌನವೇ ಉತ್ತಮ ಎಂಬ ಮನಮೋಹನ್ ಸಿಂಗ್ ನೀತಿಯನ್ನು ವಿರೋಧಿಸುವವರು.
- ಬಾಣಭಟ್ಟ