ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 2 Oct 2013, 10:54 am

ಬೆಂಗಳೂರಿನಿಂದ ಮಂಜುನಾಥ್ ಎನ್ ದೂರವಾಣಿ ಕರೆ ಮಾಡಿ ಅ.2ರ ಪತ್ರಿಕೆಯ ಪ್ರಮಾದವೊಂದನ್ನು ಗಮನಕ್ಕೆ ತಂದಿದ್ದಾರೆ. 'ಪುಟ 14ರಲ್ಲಿ 'ಲಾಲುಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟ' ಎಂಬ ಸುದ್ದಿ ಪ್ರಕಟಿಸಿದ್ದೀರಿ. ಸುದ್ದಿಯ ಮೊದಲ ಪ್ಯಾರಾದಲ್ಲಿಯೂ ಇದೇ ಪ್ರಮಾದವನ್ನು ಮುಂದುವರೆಸಿ, 'ಮೇವು ಹಗರಣದ ಪ್ರಕರಣವೊಂದರಲ್ಲಿ ದೋಷಿ ಎಂದು ಘೋಷಿತವಾಗಿರುವ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಮತ್ತು ಇತರ ಆರೋಪಿಗಳಿಗೆ ಸಿಬಿಐನ ವಿಶೇಷ ಕೋರ್ಟ್ ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ' ಎಂದು ಪ್ರಕಟಿಸಲಾಗಿದೆ. ಆದರೆ ನಾನು ಇತರ ಪತ್ರಿಕೆಗಳಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಗಮನಿಸಿದಂತೆ ಅ.3ರಂದು ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಪ್ರಕಟಿಸಲಿದೆ. ಇದಲ್ಲದೇ ಗಾಂಧಿ ಜಯಂತಿಯಂದು ಯಾವುದೆ ಸರ್ಕಾರಿ ಕಚೇರಿ ಅಥವಾ ಕೋರ್ಟ್ ಕಾರ್ಯನಿರ್ವಹಿಸುವುದಿಲ್ಲ. ಹೀಗಿರುವಾಗ ಕೋರ್ಟ್‌ನಿಂದ ತೀರ್ಪು ನಿರೀಕ್ಷಿಸಲು ಸಾಧ್ಯವಿದೆಯೇ?' ಎಂದು ಅವರು ಪ್ರಶ್ನಿಸಿದ್ದಾರೆ.
ಮೈಸೂರಿನಿಂದ ಸಿ.ದಿನಮಣಿ ರಾವ್ ಅವರು ಪತ್ರ ಕಳುಹಿಸಿದ್ದಾರೆ. 'ಸೆ.27ರಂದು ಪುಟ 4ರಲ್ಲಿ 'ವಿಶ್ವ ಹೃದ್ರೋಗ ದಿನ' ಶೀರ್ಷಿಕೆಯಲ್ಲಿ ಹೃದ್ರೋಗಿಗಳ ಕುರಿತು ಕೆಲ ಅಂಕಿ ಅಂಶಗಳು ಪ್ರಕಟವಾಗಿವೆ. ನಿಮ್ಮ ವರದಿಯ ಪ್ರಕಾರ ಪ್ರಪಂಚದಲ್ಲಿ 1.73 ಕೋಟಿ ಹೃದ್ರೋಗಿಗಳಿದ್ದಾರೆ. ಏಷ್ಯಾದಲ್ಲಿಯೇ 36 ಲಕ್ಷ ರೋಗಿಗಳಿದ್ದಾರೆ. ಹೃದ್ರೋಗ ತಜ್ಞ ಡಾ.ಕೇಶವ್ ಮೂರ್ತಿ ಮಾತನಾಡಿ, 'ಭಾರತದಲ್ಲಿ 2.9 ಕೋಟಿ(2001ರಲ್ಲಿ) ಹಾಗೂ 2010ಕ್ಕೆ 4.5 ಕೋಟಿ ಮುಟ್ಟಿದೆ' ಎಂಬ ವರದಿ ಪ್ರಕಟವಾಗಿದೆ. ನನ್ನ ಅನಿಸಿಕೆಯೆಂದರೆ, ಪ್ರಪಂಚವೆಂದರೆ ಅದರಲ್ಲಿ ಭಾರತವೂ ಸೇರಿದೆ ಅಲ್ಲವೇ? ಭಾರತದಲ್ಲಿಯೇ 4.5 ಕೋಟಿ ಹೃದ್ರೋಗಿಗಳಿದ್ದರೇ 1.73 ಕೋಟಿ ಯಾವ ಪ್ರಪಂಚದ್ದು? ಭಾಷೆಯ ಬಳಕೆ ಹಾಗೂ ಸುದ್ದಿಗಳ ಮುದ್ರಣದಲ್ಲಿ ತಪ್ಪುಗಳಾಗುವುದು ಸಹಜ. ಆದರೆ ಗಣಿತದಲ್ಲಿ ತಪ್ಪು ಆಗಲು ಸಾಧ್ಯವಿಲ್ಲ. ಅಂಕಿ ಅಂಶಗಳ ಮಾಹಿತಿ ಸರಿಯಾಗಿರಬೇಕಲ್ಲವೆ? ಸುದ್ದಿ ಪ್ರಕಟಿಸುವಾಗ ಅಂಕಿ ಅಂಶಗಳನ್ನು ಕೂಡ ತಿಳಿಯಲು ಕಾಲಾವಕಾಶ ಕಡಿಮೆಯಾದ ಕಾರಣ ತಪ್ಪುಗಳು ನುಸುಳಿವೆ ಎಂದು ಸಮಾಧಾನ ಪಟ್ಟುಕೊಳ್ಳುವುದು ಸರಿ ಎನಿಸುತ್ತದೆ?'
'ಇನ್ನು ಸೆ.25ರ ಪುಟ2ರ ಮೈಸೂರು ಆವೃತ್ತಿಯಲ್ಲಿ 'ರಸ್ತೆ ಡಾಂಬರೀಕರಣಕ್ಕೆ ಪ್ರತಿಭಟನೆ' ಎಂದು ಸುದ್ದಿ ಪ್ರಕಟಿಸಲಾಗಿದೆ. ಇದನ್ನು ನೋಡಿದಾಗ 'ಡಾಂಬರು ಹಾಕಲು ಪ್ರತಿಭಟನೆ' ಎಂಬರ್ಥ ಮೂಡುತ್ತದೆ. ಬದಲಾಗಿ 'ಇರ್ವಿನ್ ರಸ್ತೆ ಡಾಂಬರೀಕರಣಕ್ಕೆ ಆಗ್ರಹ' ಎಂದು ಶೀರ್ಷಿಕೆ ಕೊಡಬಹುದಿತ್ತಲ್ಲವೇ? ಇನ್ನು ಪುಟ 5ರಲ್ಲಿ ಪ್ರಕಟಿಸಿದ ಬಾಕ್ಸ್ ಸುದ್ದಿಯೊಂದರಲ್ಲಿ 'ಸಚಿವರಿಗೆ ಹಲವು ಸಲಹೆ' ಎಂದಿದ್ದೀರಿ. ಅಲ್ಲಿ ಸಲಹೆಗಳು ಇರಬೇಕಲ್ಲವೆ? ಆದರೆ ನೀವು ಸಚಿವರು, ಶಾಸಕರು, ಗಣ್ಯರ ಅಧಿಕಾರಿಗಳ ದಂಡುಗಳ ಹೆಸರು ತಿಳಿಸಿದ್ದೀರಿ. ಸಲಹೆಗಳು ಯಾವವು ಎಂದು ಮಾತ್ರ ತಿಳಿಸಿಲ್ಲ. ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ವರದಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರ ನ್ಯಾ.ಕೆ.ಎಸ್.ಪುಟ್ಟಸ್ವಾಮಿ ಎಂದು ಹೇಳುತ್ತೀರಿ, ಆದರೆ ಅವರು ನಿವೃತ್ತರಲ್ಲವೇ?' ಎಂದು ಅವರು ಪ್ರಶ್ನಿಸಿದ್ದಾರೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement