ಆತ್ಮವಿಶ್ವಾಸದ ಪರಮಾವಧಿ...
ಹಳ್ಳಿಯ ಕೆಲವು ಟೈಂಪಾಸ್ ಯುವಕರು ಕಟ್ಟೆಯೊಂದರ ಮೇಲೆ ಹರಟುತ್ತಾ ಕುಳಿತಿದ್ದರು. ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ ಅದು ಭಾರತದಿಂದ ಬೇರೆಯಾಗಬೇಕು ಎಂಬುದು ಅಂದಿನ ಚರ್ಚೆಯ ವಿಷಯವಾಗಿತ್ತು.
ಯುವಕ 1: ಕರ್ನಾಟಕವನ್ನು ಭಾರತದಿಂದ ಬೇರೆ ಮಾಡ್ತೀವಿ ಅಂತ ಇಟ್ಕೊಳ್ಳಿ, ಆದರೆ ಅದನ್ನು ಅಭಿವೃದ್ಧಿ ಮಾಡೋದು ಹೇಗೆ?
ಯುವಕ 2: ನಾವು ಮೊದಲು ಅಮೆರಿಕದ ಮೇಲೆ ಯುದ್ಧ ಮಾಡೋಣ. ಹೇಗಿದ್ರೂ ಅಮೆರಿಕ ನಮ್ಮನ್ನು ಸೋಲಿಸಿ ನಮ್ಮ ನೆಲದಲ್ಲಿ ಬಂದು ಕೂಡುತ್ತೆ. ಆಗ ಆಟೋಮೆಟಿಕ್ ಆಗಿ ಡೆವಲಪ್ಮೆಂಟ್ ಆಗುತ್ತೆ!
ಅಲ್ಲೇ ಬೀಡಿ ಸೇದುತ್ತಾ ಕುಳಿತಿದ್ದ ಮುದುಕನೊಬ್ಬ ಚಿಂತೆಯಿಂದ ಕೇಳಿದ: ಅದೆಲ್ಲ ಸರಿಯಪ್ಪ, ಆದ್ರೆ ಒಂದು ವೇಳೆ ನಾವೇ ಯುದ್ಧದಲ್ಲಿ ಗೆದ್ದು ಅಮೆರಿಕ ನಮ್ಮ ವಶಕ್ಕೆ ಬಂತು ಅಂದ್ರೆ ಏನು ಮಾಡೋದು?!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.