ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹೊಸವರ್ಷದಂದು ಹುಡುಗಿಯರು ಹೆಚ್ಚಾಗಿ ಸೀರೆ ಧರಿಸಲು ಬಯಸುತ್ತಾರಲ್ಲಾ?

Mainashree
Updated On : 4 Oct 2013, 10:22 am

ಆರೀಫ್ ದಾವಣಗೆರೆ, 9964280609
ಹೊಸವರ್ಷದಂದು ಹುಡುಗಿಯರು ಹೆಚ್ಚಾಗಿ ಸೀರೆ ಧರಿಸಲು ಬಯಸುತ್ತಾರಲ್ಲಾ?
ಏನೂ ತೊಡದಿರುವ ನಿರ್ಧಾರಕ್ಕಿಂತ ಇದು ಒಳ್ಳೆಯದೇ ತಾನೇ?

ಕೆ. ಎನ್. ನಾರಾಯಣರೆಡ್ಡಿ, ಕೆಜಿಎಫ್
ಕಳ್ಳನಿಗೂ ಭಿಕ್ಷುಕನಿಗೂ ಇರುವ ವ್ಯತ್ಯಾಸವೇನು?
ಬಹುತೇಕ ರಾಜಕಾರಣಿಗಳು ಈ ಎರಡೂ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದಷ್ಟೇ
ಹೇಳಬಹುದು.

ವಿಕ್ರಂ ಕುಮಾರ್, 8123318034
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಗಂಡೊಂದು ಕಲಿತರೆ?
ಕಲಿಯುವುದು ಏನನ್ನು ಎಂಬುದರ ಮೇಲೆ ಅವಲಂಬಿಸಿರುತ್ತದೆ!

ಫ್ಯಾಷನ್ ಡಿಸೈನರ್ ಮಧು, 9945737427
ಮದುವೆಯೇ ಸಮಸ್ಯೆ. ಹೀಗಿರುವಾಗ ಎಲ್ಲ ಸಮಸ್ಯೆಗಳಿಗೂ ಮದುವೆಯೇ ಪರಿಹಾರ ಅಂತ ನಂಬ್ತಾರಲ್ಲ?
ಮದುವೆಯ ಸಮಸ್ಯೆ ಮುಂದೆ ಉಳಿದೆಲ್ಲವೂ ಗೌಣ ಎನ್ನಿಸುತ್ತಾದ್ದರಿಂದ!

ರವಿಕುಮಾರ್ ಜಿ. ಬಿ. 9449669897
ರಾಜಕಾರಣಿಗಳು ಇದ್ದಾಗ ಬಯ್ದು, ಸತ್ತಮೇಲೆ ತುಂಬಲಾರದ ನಷ್ಟ ಎನ್ನುತ್ತಾರಲ್ಲ?
ಬಯ್ಗುಳ ಬಳಕೆಗೆ ಅವಕಾಶ ನಷ್ಟವಾಯ್ತಲ್ಲ ಎಂಬ ಬೇಜಾರಿರಬಹುದು.

 ಬಾಣಭಟ್ಟ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement