ಮೋದಿ ಮೋಡಿಯನ್ನು ವಿರೋಧಿಸುವ ಅನಂತಮೂರ್ತಿ...
ಚಿರಪ್ರಭ ನಂಜನಗೂಡು, 8552793107
ಮೋದಿ ಮೋಡಿಯನ್ನು ವಿರೋಧಿಸುವ ಅನಂತಮೂರ್ತಿಯವರು ಮೌನ ಮೋಹನ ರಾಗವನ್ನು ಸಹಿಸಿಕೊಂಡಿದ್ದಾದರೂ ಹೇಗೆ?
ಹೇಳಿದ್ದನ್ನು ಕೇಳಿಕೊಂಡು ಸುಮ್ಮನಿರುವವರೆಂದರೆ ಎಲ್ಲರಿಗೂ ಇಷ್ಟ!
ರಮೇಶ್ ಭಟ್ ಆವರ್ಸೆ, ಮೈಸೂರು, 9164276058
ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಮೋಡಿ ಮಾಡ್ತಿದಾರೆ. ಆದರೆ ಈ ರಾಹುಲ್‌ಗೆ ಯಾವಾಗ 'ರಾಹು'ಕಾಲ ಬರೋದು?
ಅವರು ಸದ್ಯ ಗುಳಿಕಕಾಲದ ನಿರೀಕ್ಷೆಯಲ್ಲಿದ್ದಾರೆ!
ಆಧಾರದ ಮೂಲಾಧಾರದ ಬಗ್ಗೆ ಸುಪ್ರೀಂ ಕೋರ್ಟಿಗೆ ಹೋಗಿದ್ದರಿಂದ ದೇಶಕ್ಕೆ 50 ಸಾವಿರ ಕೋಟಿ ನಷ್ಟವಾಯ್ತಲ್ಲ?
ಜನ್ರ ದುಡ್ಡು ಯಾರದ್ದೋ ಜಾತ್ರೆ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಸಾಗರದ ನೀರಿನ ಅಲೆ ದಡಕ್ಕೆ ಅಪ್ಪಳಿಸಿದರೆ ಹೃದಯಸಾಗರದ ಪ್ರೀತಿಯ ಅಲೆ ಎಲ್ಲಿಗೆ ಅಪ್ಪಳಿಸುತ್ತದೆ?
ಹೆಚ್ಚು ಕಡಿಮೆಯಾದರೆ ಜೀವನಕ್ಕೇ ಅಪ್ಪಳಿಸುತ್ತದೆ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಕವಿಗಳು ಎಲ್ಲಾ ಬಿಟ್ಟು ಸ್ತ್ರೀಯರನ್ನೇ ಹೆಚ್ಚು ವರ್ಣಿಸುತ್ತಾರೇಕೆ?
ಗಂಡಸರು ಹೆಚ್ಚು ಓದಲೆಂದು!
ಬಾಣಭಟ್ಟ