ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕುದ್ರೋಳಿಯ ಕ್ರಾಂತಿ

ಭಾನುವಾರ, ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿನ...

Rashmi Kasaragodu
Updated On : 7 Oct 2013, 10:40 am

ಭಾನುವಾರ, ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿನ ಕುದ್ರೋಳಿಯ ದೇವಾಲಯದಲ್ಲಿ, ಇಬ್ಬರು ವಿಧವೆಯರಿಂದ ದೇವರಿಗೆ ಪೂಜೆ ಮಾಡಿಸಿ, ಭಕ್ತ ಸಮುದಾಯಕ್ಕೆ ತೀರ್ಥ-ಪ್ರಸಾದವನ್ನು ವಿನಿಯೋಗಿಸುವ ಕಾರ್ಯಕ್ರಮ ನಡೆದಿದ್ದು ಒಂದು ರೀತಿಯಲ್ಲಿ ಕ್ರಾಂತಿಕಾರಿ ಆಂದೋಲನವೊಂದರ ಆರಂಭವೇ.
ಸಾಮಾಜಿಕ ಪರಿವರ್ತನೆಯ ಮಹಾ ಯಾತ್ರೆಯಲ್ಲಿ ನಿಜಕ್ಕೂ ಇದೊಂದು ಪರಿಣಾಮಕಾರಿಯಾದ ದೊಡ್ಡ ಹೆಜ್ಜೆ. ಒಮ್ಮೆ ಎಲ್ಲಾದರೂ ಒಂದು ಕಡೆ ಅಂಧ ಶ್ರದ್ಧೆಯ ವಿರುದ್ಧ ಪ್ರಮಾಣಿಕವಾದ ರೀತಿಯಲ್ಲಿ ಕಾರ್ಯಾಚರಣೆ ಆರಂಭವಾದರೆ ಅದು ಇತರ ಕಡೆಗಳಿಗೆ, ಇತರ ಸಮುದಾಯಗಳಿಗೆ ಹಬ್ಬುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಅದರಲ್ಲೂ ಪಾರಂಪರಿಕ ಸಮಾಜದಲ್ಲಿನ ಮೇಲು-ಕೀಳು ಜನಾಂಗಗಳ ವಿಭಜನೆಯ ಭಾವನೆಯನ್ನು ಬೇರು ಸಹಿತ ಕಿತ್ತು ಹಾಕುವ ಅತಿ ದೊಡ್ಡ ಆಂದೋಲನ ನಡೆಸಿದ ನಾರಾಯಣ ಗುರು ಹೆಸರಿನಲ್ಲೇ ಈ ಆಂದೋಲನ ಆರಂಭವಾಗಿರುವುದು ಸ್ವಾಗತಾರ್ಹ. ನಮ್ಮ ರಾಜ್ಯದಲ್ಲೂ ಈ ಆಂದೋಲನ ನೆರೆಯ ರಾಜ್ಯಗಳಲ್ಲಿನ ಸ್ವಾಭಿಮಾನಿ ಸಾಮಾಜಿಕ ವ್ಯವಸ್ಥೆಯನ್ನು ಸರಿಗಟ್ಟುವ ರೀತಿಯಲ್ಲಿ ಬೆಳೆಯಬೇಕು.
ಕುದ್ರೋಳಿಯ ಕ್ರಾಂತಿಯ ಮರುದಿನವೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರದ ಪುರ ಪ್ರವೇಶ ನಡೆಸಿ, ಕುರುಡು ನಂಬಿಕೆಯ ಆಧಾರಸ್ಥಂಭವನ್ನೇ ಉರುಳಿಸಿದ್ದು ಗಮನಾರ್ಹ. ಅಭಿನಂದನೆಗಳು ಸಿದ್ಧರಾಮಯ್ಯ ಅವರೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement