ಗಂಡ ಹೆಂಡತಿಯ ಸೀರೆ ಒಗೆಯುವುದು ಪ್ರೀತಿಯ ಸಂಕೇತವೇ?
ರಮೇಶ್ ಭಟ್ ಆವರ್ಸೆ, ಮೈಸೂರು, 9164276058
ಅನಂತಮೂರ್ತಿ ಅವರು ಸ್ವಭಾವತಃ ಕಿರಿಕ್ಕೋ ಅಥವಾ ಕಿರಿಕ್ ಸ್ವಭಾವದವರೋ?
ಇದನ್ನು ತೀರ್ಮಾನಿಸಲು ಸಮಿತಿ ನೇಮಿಸುವ ಅಗತ್ಯವಿದೆ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಒಂದೊಮ್ಮೆ ಮನುಷ್ಯರಿಗೆ ಮಾಯವಾಗೋ ಶಕ್ತಿ ಇದ್ದಿದ್ದರೆ?
ಸಿಬಿಐ ನೋಟೀಸ್ ಬರುತ್ತಿದ್ದಂತೆ ದೇಶದಿಂದಲೇ ಮಾಯವಾಗೋ ಕಲೆ ಕೆಲವರಿಗೆ ಸಿದ್ಧಿಸಿದೆ!
ಪೇಂಟರ್ ಪಾಪು ಸಂತೇಮರಹಳ್ಳಿ, 9008877712
ಬಡತನಕ್ಕೆ ಮೂಲ ಕಾರಣ ಯಾವುದು?
ಹಣವಿಲ್ಲದೇ ಇರುವುದು!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಗಂಡ ಹೆಂಡತಿಯ ಸೀರೆ ಒಗೆಯುವುದು ಪ್ರೀತಿಯ ಸಂಕೇತವೇ?
ತೆಗೆಯುವುದು ಮಾತ್ರ ಪ್ರೀತಿಯ ಸಂಕೇತ ಅಂದುಕೊಂಡವರಿಗೆ ಆಘಾತವಾಗಬಹುದು.
ಕೆನ್ನಾಳು ಭಾಸ್ಕರ, 9036416729
ಗೆಜ್ಜೆ ಸದ್ದಿಗೂ, ಗಂಟೆ ಸದ್ದಿಗೂ ಇರುವ ವ್ಯತ್ಯಾಸವೇನು?
ಗಂಟೆ ಸದ್ದು ಕಣ್ಣು ಮುಚ್ಚಿಸುತ್ತದೆ, ಗೆಜ್ಜೆ ಸದ್ದು ಮುಚ್ಚಿದ ಕಣ್ಣನ್ನೂ ತೆರೆಸುತ್ತದೆ!
-ಬಾಣಭಟ್ಟ