ಮನುಷ್ಯನ ಬಾಯಲ್ಲಿ ಮೂವತ್ತೆರಡೇ ಹಲ್ಲುಗಳು ಯಾಕೆ?
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಮನುಷ್ಯನ ಬಾಯಲ್ಲಿ ಮೂವತ್ತೆರಡೇ ಹಲ್ಲುಗಳು ಯಾಕೆ?
ಉದುರಿಸುವವರಿಗೆ ಸುಲಭವಾಗಲಿ ಅಂತ!
ಪೇಂಟರ್ ಪಾಪು ಸಂತೇಮರಹಳ್ಳಿ, 9008877712
ಜೀವನದಲ್ಲಿ ಎಷ್ಟು ಬಣ್ಣಗಳಿವೆ?
ಇರೋ ಬಣ್ಣಗಳನ್ನೆಲ್ಲ ಬಳಿಯೋಕ್ಕಾಗಲ್ಲ ಅಂತ ಪೇಂಟರ್ಗೇ ಚೆನ್ನಾಗಿಗೊತ್ತಿರಬೇಕು.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಓದಲು ಸರ್ಕಾರಿ ಸೀಟು ಬೇಕು ಎಂದು ಆಸೆಪಡೋ ವೈದ್ಯಕೀಯ ವಿದ್ಯಾರ್ಥಿಗಳು ಕೆಲಸ ಮಾತ್ರ ಪ್ರೈವೇಟ್ ಬೇಕು ಅಂತಾರಲ್ಲ ಯಾಕೆ?
ಓದೋವಾಗ ಫೀಸ್ ಕಡಿಮೆ ಇರಬೇಕು, ದುಡಿಯೋವಾಗ ಫೀಸ್ ಜಾಸ್ತಿ ಇರಬೇಕು.
ರವಿಕುಮಾರ ಜಿ.ಬಿ., 9449669897
ಹುಡುಗಿಯರು ಎಷ್ಟೇ ಸುಂದರವಾಗಿದ್ದರೂ ಇನ್ನೊಂದು ಹುಡುಗಿಯನ್ನು ನೋಡಿ
ಹೊಟ್ಟೆಕಿಚ್ಚುಪಡಲು ಕಾರಣ?
ಹೆಂಡತಿ ಎಷ್ಟೇ ಚೆನ್ನಾಗಿದ್ದರೂ ಇನ್ನೊಂದು
ಹುಡುಗಿಯನ್ನು ನೋಡುತ್ತಾರಲ್ಲ ಅದಕ್ಕೆ!
ರವಿಕುಮಾರ ಜಿ.ಬಿ., 9449669897
ಸಕ್ಕರೆ ಕಾಯಿಲೆ ಹೆಚ್ಚಾಗಿ ಶ್ರೀಮಂತರಿಗೆ ಬರಲು ಕಾರಣವೇನು?
ಸುಖ ಹೆಚ್ಚಾಗಿರುವುದರಿಂದ.
ಬಾಣಭಟ್ಟ