ತರುಣಿಯರು ಹಸಿರು ದ್ರಾಕ್ಷಿ ಇದ್ದಂತೆ. ವಯಸ್ಕ ರಮಣಿಯರು?
ಚಿರಪ್ರಭ, ನಂಜನಗೂಡು, 8553793107
ಸರ್ಕಾರದಿಂದ ಸಾಲ ಪಡೆದು ಸರ್ಕಾರಕ್ಕೆ ಟೋಪಿ ಹಾಕಿ ಎನ್ನುವ ಅಧ್ಯಕ್ಷರಿರುವ ಪಕ್ಷದಿಂದ ಏನನ್ನು ನಿರೀಕ್ಷಿಸಬಹುದು?
ಬೇಕಾಬಿಟ್ಟಿ ಸಾಲವನ್ನು!
ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ತರುಣಿಯರು ಹಸಿರು ದ್ರಾಕ್ಷಿ ಇದ್ದಂತೆ. ವಯಸ್ಕ ರಮಣಿಯರು?
ಒಣ ದ್ರಾಕ್ಷಿ!
ಫ್ಯಾಷನ್ ಡಿಸೈನರ್ ಮಧು, 9945737427
ಚುಂಬಿಸಿದ ಕೂಡಲೇ ಅವಳು 'ಇದು ಈ ಹೊತ್ತಿನ ವಿಶೇಷ. ನಿರಂತರ ಚುಂಬನಕ್ಕಾಗಿ ಕಾಯ್ತಾ ಇರು' ಅಂತ ಕಣ್ಣು ಮಿಟುಕಿಸ್ತಾಳಲ್ಲ?
ಮಿತಿಮೀರಿ ನ್ಯೂಸ್ ಚಾನಲ್
ನೋಡ್ತಾಳೆ ಅಂತಾಯ್ತು!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಬಳುಕುವ ಬಳ್ಳಿಯಂತಿದ್ದ ನನ್ನವಳು ಈಗ ಬಳ್ಳಿಯಲ್ಲಿರುವ ಕುಂಬಳಕಾಯಿಯಂತಾಗಿದ್ದಾಳಲ್ಲ?
ಬಳ್ಳಿಯಿಂದ ಹೂವು, ಹೂವಿನಿಂದ
ಕಾಯಿ ಪ್ರಕೃತಿ ನಿಯಮ.
ಡಾ. ವಿ. ಪುಗಳೇಂದಿ, ಬಳ್ಳಾರಿ, 9483980348
ಭಟ್ರೇ ಯಮ ನಮ್ಮನ್ನು ಯಾವ ಕಡೆಯಿಂದಾದರೂ ಓಡಿಸಿಕೊಂಡು ಬರಬಹುದು ಎಂಬುದಕ್ಕಾಗಿಯೇ ವಾಹನಗಳ ಎರಡೂ ಕಡೆಗೂ ರೇರ್ ವ್ಯೂ ಮಿರರ್ ಇಟ್ಟಿದ್ದಾರಾ?
ಯಮನ ಕೆಲಸ ಸುಲಭವಾಗದಿರಲಿ
ಅನ್ನೋ ಕಾರಣಕ್ಕೆ ಅದನ್ನು ಇಡಲಾಗಿದೆ.
ಬಾಣಭಟ್ಟ