ಹುಚ್ಚು ಎನ್ನುವುದು ಹೆಚ್ಚಾಗಿ ಬರುವುದು ಹದಿ...
ಹುಚ್ಚು ಎನ್ನುವುದು ಹೆಚ್ಚಾಗಿ ಬರುವುದು ಹದಿ ಹರೆಯದಲ್ಲೋ, ವಯಸ್ಸಾದ ಮೇಲೋ?
ಯಾವುದರ ಹುಚ್ಚು ಎಂಬುದನ್ನು ಅವಲಂಬಿಸಿರುತ್ತದೆ.
ಬರ್ಕಲಿರಮೇಶ ಕಿರಗಂದೂರು ಮಂಡ್ಯ, 9008741348
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಪ್ರೇಮದ ಸವಿಯಲ್ಲಿ ಕಣ್ಣೀರು ಯಾವಾಗಲೂ ಬೆರೆತುಕೊಂಡಿರುತ್ತದೇಕೆ?
ರುಚಿಗೆ ತಕ್ಕಷ್ಟು ಉಪ್ಪು ಬೇಕೇ ಬೇಕು.
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಬುದ್ದಿಜೀವಿಗಳೆನಿಸಿಕೊಂಡವರು ತಮಗೆ ಮಾತ್ರ ಬುದ್ದಿ ಇದೆ ಎನ್ನುವಹಾಗೆ ನಡೆದುಕೊಳ್ತಾರಲ್ಲ?
ಹಾಗೆ ಅಂದುಕೊಂಡಿರುವುದಕ್ಕೇ ಅವರು ಬುದ್ದಿಜೀವಿಗಳು!
ಆರೀಫ್ (ಅಪ್ಪು), ದಾವಣಗೆರೆ, 9964280609
ಯೌವ್ವನಕ್ಕೆ ಬಂದಾಗ ಹುಡುಗರು ಚಿಗುರಿದ ಮೀಸೆ ತಿರಿಸುತ್ತಾರೆ. ಆದರೆ ಹುಡುಗಿಯರು?
ಮೀಸೆ ತಿರುವುವ ಹುಡುಗರನ್ನೇ ಗಿರಿಗಿಟ್ಲೆಯಂತೆ ತಿರುಗಿಸುತ್ತಾರೆ!
ಗುರುಸ್ವಾಮಿ ದತ್ತಪ್ಪ ಕಡೂರು
ವಿಜ್ಞಾನಿಗಳು ಏಕಾಂತವಾಗಿರಲು ಬಯಸುವುದೇಕೆ?
ಹಾಗೇನಿಲ್ಲ. ಪ್ರೇಮಿಗಳೂ ಏಕಾಂತ ಬಯಸುತ್ತಾರೆ!
-ಬಾಣಭಟ್ಟ