ನಾಲ್ಕು ವಿದ್ಯಾರ್ಥಿಗಳು ಪರೀಕ್ಷೆ ಮರುದಿನವಿದ್ದರೂ ತಯಾರಿ...
ನಾಲ್ಕು ವಿದ್ಯಾರ್ಥಿಗಳು ಪರೀಕ್ಷೆ ಮರುದಿನವಿದ್ದರೂ ತಯಾರಿ ನಡೆಸಿರಲಿಲ್ಲ. ಎಲ್ಲರೂ ಸೇರಿ ಒಂದು ಪ್ಲ್ಯಾನ್ ರೂಪಿಸಿ ಪ್ರಿನ್ಸಿಪಾಲರ ಬಳಿ ಹೋಗಿ ಹೇಳಿದರು, "ಸರ್ ನಾವು ಮದುವೆಯೊಂದಕ್ಕೆ ಹೋಗಿದ್ವಿ, ವಾಪಸ್ ಬರಬೇಕಾದ್ರೆ ಟೈಯರ್ ಪಂಕ್ಚರ್ ಆಗ್ಬಿಡ್ತು.
ರಾತ್ರಿಯಿಡೀ ಕಾರನ್ನು ತಳ್ಳಿಕೊಂಡು ಬಂದು ಬೆಂಗಳೂರು ತಲುಪಿದ್ವಿ. ಅದಕ್ಕೆ ಓದೋದಕ್ಕೆ ಆಗ್ಲಿಲ್ಲ." ಅವರ ಮಾತನ್ನು ನಂಬಿದ ಪ್ರಿನ್ಸಿಪಾಲ್ ಪರೀಕ್ಷೆ ಒಂದು ದಿನಕ್ಕೆ ಮುಂದೂಡಿದ. ಮರುದಿನ ಪರೀಕ್ಷೆಯಲ್ಲಿ ಆ ನಾಲ್ವರನ್ನೂ ಪ್ರತ್ಯೇಕ ರೂಮುಗಳಲ್ಲಿ ಕೂರಿಸಲಾಯಿತು. ಅವರಿಗೆ ಪಾಸಾಗುವುದಕ್ಕೆ ಕೇವಲ ಒಂದೇ ಪ್ರಶ್ನೆ ಕೇಳಲಾಗಿತ್ತು. "ಯಾವ ಟೈಯರ್ ಪಂಕ್ಚರ್ ಆಗಿತ್ತು? ನಾಲ್ವರೂ ಒಂದೇ ಉತ್ತರ ಹೇಳದಿದ್ದರೆ ನೀವೆಲ್ಲ ಫೇಲ್"!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.