ಹೆಣ್ಣು ಕ್ಷಮಯಾ ಧರಿತ್ರಿಯಾದರೆ, ಗಂಡು?
ಹೆಣ್ಣು ಕ್ಷಮಯಾ ಧರಿತ್ರಿಯಾದರೆ, ಗಂಡು?
ಅವರ ಕ್ಷಮೆಯಲ್ಲೇ ಬದುಕೋ ದರಿದ್ರಿ!
ಬರ್ಕಲಿ ರಮೇಶ, ಕಿರಗಂದೂರು, ಮಂಡ್ಯ, 9008741348
ಜಗದೀಶ ಎಸ್. ಬೆಳಗಾವಿ, 8722444410
ಸತ್ಯವಂತರಿಗೆ ಬಹಳ ತಾಪತ್ರಯಗಳು ಏಕೆ?
ಇದ್ದಿದ್ದು ಇದ್ಹಂಗೆ ಹೇಳಿದ್ರೆ ಬಂದು ಎದೆ ಮೇಲೆ ಒದೀದೆ ಬಿಡ್ತಾರಾ!
ರವಿಕುಮಾರ ಜಿ.ಬಿ. 9449669897
ಹೆಣ್ಣು ಸೌಂದರ್ಯದ ಪ್ರತೀಕವಾದರೆ ಗಂಡು?
ಸೌಂದರ್ಯಾರಾಧನೆಯ ಪ್ರತೀಕ!
ಫ್ಯಾಷನ್ ಡಿಸೈನರ್ ಮಧು, 9945737427
ಬುದ್ಧಿವಂತ ಪ್ರೇಮಿಗಳು ಮೊದಲ ಪ್ರೀತಿಯಲ್ಲಿ ಮಾಡಿದ ತಪ್ಪನ್ನು ಎರಡನೇ ಪ್ರೀತಿಯಲ್ಲಿ ಮಾಡುವುದಿಲ್ವಂತೆ?
ಎರಡನೇ ಪ್ರೀತಿಯಲ್ಲಿ ತಪ್ಪು ಮಾಡದಿದ್ದರೆ ಮೂರನೇ ಪ್ರೀತಿಯ ಅವಕಾಶದಿಂದ ವಂಚಿತರಾಗಬೇಕಾಗುತ್ತದೆ!
ವಿ. ಹೇಮಂತಕುಮಾರ, ಬೆಂಗಳೂರು, 9916707979
ಪ್ರೀತಿಯೆಂಬ ಹಣತೆಯ ಜ್ಯೋತಿಗೆ ಪ್ರೇಮಿಗಳೆಂಬ ಪತಂಗಗಳು ಬಲಿಯಾಗಲೇಬೇಕಾ?
ಗಂಡ-ಹೆಂಡತಿಯಾಗಿಯೂ ಬಲಿಯಾಗಬಹುದು!
-ಬಾಣಭಟ್ಟ