ಮನೆ
ಇದು ಎಲ್ಲರ ಸಾಮಾನ್ಯ ಕಾ-ಮನೆ
ಮನೆ ಕಟ್ಟಿ ನೋಡಬೇಕಂತೆ. ಕಟ್ಟಿ ಮುಗಿಯುವ ತನಕ ಕಟ್ಟಿದವ ನೋಡುವಷ್ಟಿದ್ದರೆ....
ಅರಮನೆ ಕಟ್ಟಲು ಹೋಗಿ ಅರೆ-ಮನೆ ಆಗುವ ಸಂಭವವೇ ಹೆಚ್ಚು
ಕೆಲವರ ಮಾನದ ಮಾಪಕ
ಗೃಹಸ್ಥರೆಲ್ಲರ ಅನಿವಾರ್ಯ ಈ ಗೃಹ
ವಾಸ ಮಾಡಲೊಂದು ನಿವಾಸ
ಜನಗಳ ಜೊತೆ ದನಗಳಿಗೂ ಜಾಗವಿದ್ದರೆ ಅದು ಸದನ
ನಿತ್ಯ ಪ್ರಲಯದ ಆಲಯ ಈ ನಿಲಯ
ಸಾದಾ ಇದ್ದರೂ ಬಡವನಿಗದು ಸೌಧವೇ
ಸಂಪಾದಿಸಿದ ಶ್ರೀ ಯನ್ನೆಲ್ಲ ಖರ್ಚು ಮಾಡಿ ಕಟ್ಟಿಸುವ ಶ್ರೀ ಸಾಮಾನ್ಯನ ಶ್ರೀನಿಕೇತನ
ವಾಸ್ತು ಸರಿಯಿಲ್ಲದಿದ್ದರೆ ವಾಸ್ತವವೂ ಸರಿಯಿರುವುದಿಲ್ಲವಂತೆ
ಮೊದಲೆಲ್ಲ ಒಂದು ಮನೆ ಕಟ್ಟಿಸುವುದಿದ್ದರೂ ವನವನ್ನು ಬಯಲು ಮಾಡಬೇಕಿತ್ತು. ಅದಕ್ಕೇ ಇದಕ್ಕೆ ಭವನ ಎಂದು ಹೆಸರು
ಸುಖ ದುಃಖಗಳ ಆಗರ ಈ ಆಗಾರ
ಶ್ರೀಮಂತರ ಮನೆಯಲ್ಲಿ, ಮನೆಯವರಿಗಿಂತ ಹೆಚ್ಚು ನೆಮ್ಮದಿಯಿಂದ ಮನೆಗೆಲಸದವರೇ ಇರುತ್ತಾರೆ
ಮನೆ ಕಟ್ಟಿ ಮುಗಿಸುವ ಹೊತ್ತಿಗೆ ಮನೆಯೆಂಬುದು ಸುಮ್ಮನೇ ಎನಿಸಿದರೆ ಅದು ನಿಜವಾದ ಜ್ಞಾನೋದಯ
-ವಿಶ್ವನಾಥ ಸುಂಕಸಾಳ
vishwasunkasal@yahoo.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.