ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪ್ರೇಮಿಯೊಬ್ಬಳು ಖುಷಿಗೊಂಡಿದ್ದಾಳೆ, ಪ್ರಿಯಕರನ ಹಾಳುಮಾಡಿ, ಅವನೇಕೆ...

Mainashree
Updated On : 28 Oct 2013, 10:48 am

ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಪ್ರೇಮಿಯೊಬ್ಬಳು ಖುಷಿಗೊಂಡಿದ್ದಾಳೆ, ಪ್ರಿಯಕರನ ಹಾಳುಮಾಡಿ, ಅವನೇಕೆ ಅಳುತ್ತಿದ್ದಾನೆ ಅವಳನ್ನು ನೆನಪು ಮಾಡಿಕೊಂಡು?
ಯಾವಾಗಲೂ ಹಾಳಾದವರೇ ಅಳುವುದು, ಹಾಳುಮಾಡಿದವರು ಖುಷಿಯಾಗೇ ಇರುತ್ತಾರೆ!

ಕಾರೇಕುರ ಅಶೋಕ, 8892320820
ಮಠಗಳಿಗೆ ಅನುದಾನ ಕೊಡೋದು ತಪು ್ಪ ಅಂತ ಬೊಬ್ಬೆ ಹೊಡೀತಿದ್ದ ನಮ್ಮ ಸಿದ್ರಾಮಣ್ಣೋರು, ಸರ್ಕಾರದ ಹಣದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಮದುವೆ ಮಾಡೋಕೆ ಹೊರಟವ್ರಂತೆ?
ಇವರು ಕೊಟ್ರೆ ಓಕೆ, ಅವರು ಕೊಟ್ರೆ ಹೇಳ್ತಾರೆ ಜೋಕೆ!

ತಲವಾಟ ಮಂಜುನಾಥ, ಸಾಗರ, 9480931611
ನಾವು ಕನಸು ಕಂಡಿದ್ದೆಲ್ಲ ಆಗುವಂತಿದ್ದರೆ?
ಎಲ್ಲರೂ ಕನಸು ಕಾಣುತ್ತಲೇ ಉಳಿದುಬಿಡುತ್ತಿದ್ದರು.

ಕಾರೇಕುರ ಅಶೋಕ, 8892320820
ಹುಡಗರನ್ನು ಕಂಡಕೂಡಲೇ ಹುಡುಗೀರು ಸ್ಕೂಟರ್ ವೇಗ ಜಾಸ್ತಿ ಮಾಡ್ತಾರಲ್ಲ ಯಾಕೆ?
ಅದು ಹಾಗಲ್ಲ. ಹುಡುಗರ ಬೈಕ್ ವೇಗ ಕಡಿಮೆ ಆಗುತ್ತೆ. ಹಾಗಾಗಿ ಅವರ ಸ್ಕೂಟರ್ ಫಾಸ್ಟ್ ಹೋದಂತೆ ಅನಿಸುತ್ತೆ!


ತಲವಾಟ ಮಂಜು, ಸಾಗರ, 9480931611
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಆದರೆ ಪ್ರೇಮಿಗಳಿಗೆ?
ಮನೆಯೇ ಮೊದಲ ಕಾಟಶಾಲೆ!

 ಬಾಣಭಟ್ಟ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement