ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕನ್ನಡಕ್ಕಿರುವ ಮಾರುಕಟ್ಟೆ ಹೆಚ್ಚಿಸುವ ಕೆಲಸವಾಗಲಿ

Mainashree
Updated On : 31 Oct 2013, 11:02 am

ನವೆಂಬರ್ ಒಂದು. ಕನ್ನಡ ಮಾತಾಡುವ ಜನರೆಲ್ಲಾ ಒಂದೇ ಸೂರಿನಡಿ ಸೇರಿಸಿ ನಮ್ಮ ಕರ್ನಾಟಕ ರಾಜ್ಯ ಉದಯಿಸಿದ ದಿನವಿದು. ಪ್ರತಿವರ್ಷ ನವೆಂಬರ್ ಒಂದನೇ ದಿನದಂದು ಸಂಭ್ರಮ-ಸಡಗರ-ಕನ್ನಡ ಬಾವುಟ ಎಲ್ಲೆಡೆ ಕಂಡು ಬರುತ್ತದೆ. ಆದರೆ ಈ ಸಡಗರವೆಲ್ಲಾ ಕೇವಲ ಆ ದಿನಕ್ಕೆ ಮಾತ್ರ ಸೀಮಿತವಾಗಿರದೇ ಕನ್ನಡಕ್ಕೆ ಹೆಚ್ಚಿನ ಬಲ ತುಂಬುವ ಕೆಲಸ ಸದಾ ನಡೆಯುತ್ತಲೇ ಇರಬೇಕಿದೆ. ಆದ್ದರಿಂದ ಕನ್ನಡಿಗರು ತಮ್ಮ ಸುತ್ತ ಇರುವ ಏರ್ಪಾಡಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಉದಾಹರಣೆಗೆ, ಇಂದು ಕನ್ನಡಿಗರು ದುಡ್ಡು ತೆತ್ತು ಪಡೆಯುವ ಎಷ್ಟೋ ಖಾಸಗಿ ಸಂಸ್ಥೆ ಅಥವಾ ಸರ್ಕಾರಿ ಸೇವೆಗಳಲ್ಲಿ ಕನ್ನಡವಿಲ್ಲ. ಇಲೆಕ್ಟ್ರಾನಿಕ್ ಅಥವಾ ಮನೆ ಬಳಕೆಗಾಗಿ ಕೊಳ್ಳುವ ವಸ್ತುಗಳ ಬಳಕೆದಾರರ ಕೈಪಿಡಿ, ದುಡ್ಡು ಕೊಟ್ಟು ಪಡೆಯುವ ರಸೀತಿ, ದಿನಸಿ ವಸ್ತುಗಳ ಮಳಿಗೆಗಳಲ್ಲಿ, ಬ್ಯಾಂಕುಗಳ ಸೇವೆಗಳು, ಶಾಪಿಂಗ್ ಮಾಲುಗಳು, ಐವಿಆರ್ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದು ಬೆಳೆಯುತ್ತಲೇ ಇರುತ್ತದೆ. ಕೆಲವೊಮ್ಮೆ  ಗ್ರಾಹಕರ ಸುರಕ್ಷತೆ ಬಗ್ಗೆ ಮಾಹಿತಿಯೂ ಕನ್ನಡದಲ್ಲಿರುವುದಿಲ್ಲ. ಸೇವೆಗಳಲ್ಲಿ ಕನ್ನಡವಿಲ್ಲದೆ ಗ್ರಾಹಕರು ತೊಂದರೆಗೆ ಒಳಗಾಗುತ್ತಿದ್ದರೂ ಅದನ್ನು ಪ್ರಶ್ನೆ ಮಾಡಿ ಸರಿಪಡಿಸದೆ ಅದಕ್ಕೆ ಹೊಂದಿಕೊಂಡಿರುವುದರಿಂದ, ಸೇವೆ ಕೊಡುವವರೂ ಕನ್ನಡವನ್ನು ಬಳಸುವ ಮನಸ್ಸು ಮಾಡುವುದಿಲ್ಲ. ಹೀಗಾದರೆ ಮಾರುಕಟ್ಟೆಯಲ್ಲಿ ಕನ್ನಡದ ಪ್ರಾಮುಖ್ಯ ಇಲ್ಲವಾಗಿ, ಸೇವೆಗಳಿಗೆ ಬೇರೆ ನುಡಿಯನ್ನು ನೆಚ್ಚ ಬೇಕಾಗುತ್ತದೆ. ಗ್ರಾಹಕ ಸೇವೆಗಳಲ್ಲಿ ಹೆಚ್ಚು ಹೆಚ್ಚು ಕನ್ನಡವನ್ನು ಬಳಸುತ್ತಿದ್ದರೆ ಸೇವೆಯಲ್ಲಿನ ತೊಡಕುಗಳನ್ನು ಸರಿ ಪಡಿಸಬಹುದಲ್ಲದೆ ಕನ್ನಡಕ್ಕೆ ಹೆಚ್ಚಿನ ಆರ್ಥಿಕ ಶಕ್ತಿಯನ್ನು ತುಂಬಬಹುದು. ಕನ್ನಡದಲ್ಲಿ ಸೇವೆಗೆ ಬೇಡಿಕೆ ಇಟ್ಟರೆ ಅಪಾರ ಕನ್ನಡಿಗರಿಗೂ ಕೆಲಸ ಸಿಗುವ ಸಾಧ್ಯತೆಯನ್ನೂ ನಾವು ಮನಗಾಣಬೇಕು. ಆದ್ದರಿಂದ ಜಾಗತೀಕರಣ ಒಡ್ಡಿರುವ ಸ್ಪರ್ಧೆಯಲ್ಲಿ ಮುಂದಿನ ಹಲವಾರು ಪೀಳಿಗೆಗೆ ಕನ್ನಡವನ್ನು ದಾಟಿಸಬೇಕೆಂದರೆ ಮಾರುಕಟ್ಟೆಯಲ್ಲಿ ಕನ್ನಡವನ್ನು ಭದ್ರವಾಗಿ ಕೂರಿಸುವ ಈ ಕೆಲಸ ಆಗಲೇಬೇಕು.               
- ಅನ್ನದಾನೇಶ.ಶಿ.ಸಂಕದಾಳ, ಬೆಂಗಳೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement