ಸಾಹಿತಿಗಳೆಲ್ಲರೂ ಸಾರಾಸಗಟಾಗಿ ಕಾಂಗ್ರೆಸ್ಸನ್ನು ಬೆಂಬಲಿಸುತ್ತಿದ್ದಾರಲ್ಲಾ ಸರೀನಾ?
ಕೆ.ಬಿ. ಚನ್ನಬಸಪ್ಪ, ಯಲಹಂಕ ಉಪನಗರ, ಬೆಂಗಳೂರು
ಸಾಹಿತಿಗಳೆಲ್ಲರೂ ಸಾರಾಸಗಟಾಗಿ ಕಾಂಗ್ರೆಸ್ಸನ್ನು ಬೆಂಬಲಿಸುತ್ತಿದ್ದಾರಲ್ಲಾ ಸರೀನಾ?
ಅವರೆಲ್ಲ ಗೆದ್ದೆತ್ತಿನ ಬಾಲ ಹಿಡಿಯೋರು ಎಂಬುದು ಸಾಬೀತಾಯಿತು ಅಷ್ಟೇ.
ರವಿಕುಮಾರ ಜಿ.ಬಿ., 9449669897
ಕನ್ನಡ ಸಿನಿಮಾದಲ್ಲಿ ನಾಯಕ ನಟರು ನಾಡು-ನುಡಿಯ ಬಗ್ಗೆ ಹೊಗಳುತ್ತಾರೆ. ಆದರೆ ನಾಯಕಿ ಮಾತ್ರ ಪರಭಾಷೆಯವರೇ ಇರುತ್ತಾರಲ್ಲಾ?
ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡೋರು ನಿಜ ಜೀವನದಲ್ಲಿ ಹೀರೋಗಿಂತ ಹೆಚ್ಚು ಒಳ್ಳೆಯವರಾಗಿರುತ್ತಾರೆ!
ಚುನಾವಣೆ ಸಭೆಗಳಲ್ಲಿ ಮಂತ್ರಿಗಳ ಭಾಷಣ ಮಾಡುವ ವೇದಿಕೆ ಪಕ್ಕದಲ್ಲಿ ಆ್ಯಂಬುಲೆನ್ಸ್ ನಿಲ್ಲಿಸಿರುತ್ತಾರೆ ಏಕೆ?
ಅವರ ಭಾಷಣ ಕೇಳಿ ಜನ ಕಲ್ಲು ಹೊಡೆದರೆ ಎಂದು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಯೌವನದ ಕನಸುಗಳೆಲ್ಲ ಮುಪ್ಪಿನಲ್ಲಿ
ಮರುಕಳಿಸಿದರೆ ಹೇಗಿರುತ್ತೆ?
ಡಯಾಬಿಟೀಸ್ ಬಂದವರನ್ನು ಸ್ವೀಟ್ ಅಂಗಡಿಗೆ ಕರೆದುಕೊಂಡು ಹೋದಂಗಿರುತ್ತೆ!
ಜೆ.ಪಿ. ನಾಗರಾಜ, ದಾವಣಗೆರೆ, 9901193811
ಆಟಗಾರ್ತಿಯರು ಆಟದ ಕಡೆಗಿಂತ ತುಂಡು ಸ್ಕರ್ಟ್ ನೆಡೆಗೆ ಹೆಚ್ಚು ಗಮನ ಕೊಡ್ತಾರಲ್ಲ?
ನಿಮ್ಮಂಥವರು ಅದನ್ನೇ ಹೆಚ್ಚು ನೋಡುತ್ತಾರೆ
ಅಂತ ಅವರಿಗೂ ಗೊತ್ತು.
ಬಾಣಭಟ್ಟ