ಹುಡುಗಿಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಗಣಿತದಷ್ಟೇ 'ಕಬ್ಬಿಣದ ಕಡ್ಲೆ' ಎನ್ನುವ ಸಂಗತಿ ನಿಜ?
ಕಲಾವಿದ ಸೀನು, 9538641164
ಹುಡುಗಿಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಗಣಿತದಷ್ಟೇ 'ಕಬ್ಬಿಣದ ಕಡ್ಲೆ' ಎನ್ನುವ ಸಂಗತಿ ನಿಜ?
ಗಣಿತದಲ್ಲಿ ಸೂತ್ರದ ಪ್ರಕಾರ ಹೋದರೆ ಪಕ್ಕಾ ಉತ್ತರ ಸಿಗುತ್ತೆ. ಇಲ್ಲಿ ಆ ಸಾಧ್ಯತೆಯೂ ಇಲ್ಲ!
ಫ್ಯಾಷನ್ ಡಿಸೈನರ್ ಮಧು, 9945737427
ಆಹ್ವಾನಿಸದೇ ಬರುವ ಅತಿಥಿ, ಆಹ್ವಾನಿಸದೇ ಬರುವ ಪ್ರೀತಿ, ಇವರಿಬ್ಬರಲ್ಲಿ ಯಾರನ್ನು ಮನಸ್ಸು ಪೂರ್ವಕವಾಗಿ ಸತ್ಕರಿಸಲಿ?
ಆ ಅತಿಥಿ ಪ್ರೀತಿಸಿದವರೇ ಆಗಿದ್ದರೆ ಇನ್ನೂ ಉತ್ತಮ.
ಯ. ಪ್ರಶಾಂತ ಮೇಲಾಡಿ, ತೀರ್ಥಹಳ್ಳಿ
ಕೈ ಹಿಡಿದವಳ ಭಯ ಕಾಡದಿರಲು ಏನು ಮಾಡಬೇಕು?
ಏನೇನೋ ಮಾಡುವುದಕ್ಕೆ ಹೋಗಬಾರದಷ್ಟೆ.
ಪಿ. ಜೆ. ರಾಘವೇಂದ್ರ, ಮೈಸೂರು
ಎಲ್ಲರಿಗೂ ಕಂಡಕ್ಟರ್ ರಾಜು ಬಗ್ಗೆ ಕುತೂಹಲ ಹೆಚ್ಚಿದೆಯಲ್ಲ?
ಅಷ್ಟೊಂದು ಜನರಿಗೆ ಚಿಲ್ಲರೆ ಕೊಡೋದು ಉಳಿಸಿಕೊಂಡಿದ್ದಾರಾ?
ಕಂಡಕ್ಟರ್ ರಂಗನಾಥ್, ಮಧುಗಿರಿ
ಹುಡುಗಿಯರ ಕನಸು ನನಸಾಗುವುದು ಯಾವಾಗ?
ಅವರ ಕುರಿತ ನಿಮ್ಮ ಕನಸು ನನಸಾಗೋದು ಮುಖ್ಯ!
ಬಾಣಭಟ್ಟ