ಪೊಲೀಸರಿಗೆ ಚಳ್ಳೆಹಣ್ಣು ಅಷ್ಟೊಂದು ಇಷ್ಟಾನಾ?
ಶಿವಾಜಿರಾವ್ ಆರ್. ಪಾಂಡೆ, ದಾವಣಗೆರೆ
ಸಮಾರಂಭ ಪ್ರಾರಂಭವಾದ ಮೇಲೂ ಡ್ರೆಸ್ಸಿಂಗ್ ರೂಮಿನಲ್ಲಿ ಸಿಂಗಾರ ಮಾಡಿಕೊಳ್ಳುವವರಿಗೆ ಏನ್ ಹೇಳೋದು?
ಏನೂ ಹೇಳ್ಬೇಡಿ, ಸಮಾರಂಭ ಮುಗಿದುಬಿಡಲಿ!
ಕಂಡಕ್ಟರ್ ರಾಜು, 9844777110
ಕರ್ನಾಟಕದ ಲಿಂಗಾನುಪಾತದಲ್ಲಿ ಹುಡುಗಿಯರ ಸಂಖ್ಯೆ ಕ್ಷೀಣಿಸುತ್ತಿದೆ. ಏನು ಮಾಡೋದು?
ಹುಡುಗಿಯರನ್ನು ಪ್ರೀತಿಸಿ. ಪ್ರೇಯಸಿಯಾಗಿ ಮಾತ್ರವಲ್ಲ, ಮಕ್ಕಳ ಸ್ಥಾನದಲ್ಲೂ!
ಎಂ. ಬಿ. ಗಂಗಾಧರ, ಮೇಲುಕೋಟೆ
ಹುಡುಗೀರ ಮನಸ್ಸನ್ನು ಆಪರೇಷನ್ ಮಾಡಿ ಬದಲಾಯಿಸುವಂತಿದ್ದರೆ?
ಆಪರೇಷನ್ ಸಕ್ಸಸ್, ಡಾಕ್ಟರ್ ಡೆಡ್!
ಉಜ್ಜನಿ ಜಲಂಧರ್, 8971857200
ಪೊಲೀಸರಿಗೆ ಚಳ್ಳೆಹಣ್ಣು ಅಷ್ಟೊಂದು ಇಷ್ಟಾನಾ?
ಕಳ್ಳರು ತಿನ್ನಿಸಿದರೆ ಮಾತ್ರ!
ಕುಬೇರಪ್ಪ ಎಂ. ವಿಭೂತಿ, ಹರಿಹರ
ವರ ಸಾಫ್ಟ್ವೇರ್, ವಧು ಹಾರ್ಡ್ವೇರ್. ಮದುವೆ ಆದರೆ ಸಮರಸದ ಜೀವನ ಸಾಧ್ಯವೇ?
ಹೊಂದಾಣಿಕೆಯ ಸಾಫ್ಟ್ತನದ ಮೇಲೆ ಅವಲಂಬಿತ.
- ಬಾಣಭಟ್ಟ