ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಗೋಬಿ, ಪಾನಿಪೂರಿ ತಿನ್ನುವ ಅಭ್ಯಾಸ ಹುಡುಗರಿಗಿಂತ ಹುಡುಗಿಯರಿಗೆ ಜಾಸ್ತಿ ಏಕೆ?

Mainashree
Updated On : 11 Sept 2013, 10:51 am

ಕಲಾವಿದ ಸೀನು, 9538641164
ಗೋಬಿ, ಪಾನಿಪೂರಿ ತಿನ್ನುವ ಅಭ್ಯಾಸ ಹುಡುಗರಿಗಿಂತ ಹುಡುಗಿಯರಿಗೆ ಜಾಸ್ತಿ ಏಕೆ?
ಹುಡುಗರಿಗೆ 'ತಿನ್ನಿಸುವ' ಅಭ್ಯಾಸ ಹೆಚ್ಚಿದೆಯಲ್ಲ?

ಪರಮ ನಾಸ್ತಿಕ, 9008888669
ಗಿಡ ನೆಟ್ಟು ಹೂ ಬೆಳೆಸಿದವನು ನಾನು, ಹೂ ಕಿತ್ತು ಪೂಜೆ ಮಾಡಿದವನು ನನ್ನ ಮಿತ್ರ. ಪುಣ್ಯ ಯಾರಿಗೆ ಸಿಗುತ್ತೆ?
ಪರಮ ನಾಸ್ತಿಕರಾದ ನಿಮಗೆ ಪುಣ್ಯದ ಗುಂಗೇಕೆ? ಹೂ ಅರಳಿಸಿದ ಖುಷಿ ಸಾಕಲ್ಲವೇ?

ಆರೀಫ್, ದಾವಣಗೆರೆ 9964280609
ಒಂದು ಗಂಡಿನ ಯಶಸ್ಸಿನ ಹಿಂದೆ ಒಂದು ಹೆಣ್ಣಿರುವಳಂತೆ ಹೌದೇ?
ಸಂಖ್ಯೆಯನ್ನು ಒಂದು- ಹನ್ನೊಂದು ಅಂತೆಲ್ಲ ನಿಖರವಾಗಿ ಹೇಳಲಾಗದು!

ಎಂ. ಬಿ. ಕೃಷ್ಣಮೂರ್ತಿ, 9449130531
ಅಪಘಾತ ಮಾಡಿದ ವಾಹನ ಚಾಲಕ ಸ್ಥಳದಿಂದ ಪರಾರಿಯಾಗುವುದೇಕೆ?
ಒಂದು ಢಿಕ್ಕಿಗೆ ಪ್ರತಿಯಾಗಿ ಲೆಕ್ಕವಿಲ್ಲದಷ್ಟು ಧರ್ಮದೇಟು ತಿನ್ನುವ ಖಯಾಲಿ ಯಾರಿಗಿರಲು ಸಾಧ್ಯ?

ಗದಾಧರ ಭಟ್ ಮೈಸೂರು, 9449696863
ಮನುಷ್ಯನಿಗೆ ಆನೆಯಂತೆ ಸೊಂಡಿಲು, ಪಕ್ಷಿಯಂತೆ ರೆಕ್ಕೆ ಇದ್ದಿದ್ದರೆ?
ಬೇರೆಯವರ ವಿಷಯದಲ್ಲಿ ಇನ್ನಷ್ಟು ಮೂಗು ತೂರಿಸುವಿಕೆ ಹಾಗೂ ತನಗಾಗದವರ ಮೇಲೆ ಪಿಷ್ಟ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement