'ಕೇಳ್ರಪ್ಪೋ ಕೇಳಿ' ಪ್ರಶ್ನೆಗಳಿಗೆ ನಮ್ಮ ಪ್ರಧಾನಿ...
'ಕೇಳ್ರಪ್ಪೋ ಕೇಳಿ' ಪ್ರಶ್ನೆಗಳಿಗೆ ನಮ್ಮ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಉತ್ತರಿಸಿದರೆ ಹೇಗಿರುತ್ತೆ?
ಎಲ್ಲ ಉತ್ತರಗಳಿಗೂ ಓದುಗರು ಬಿಟ್ಟಸ್ಥಳ ತುಂಬಿಕೊಳ್ಳಬೇಕಾಗುತ್ತಿತ್ತು.
ಅಶೋಕ ಕೆ., 8892320820
ಫ್ಯಾಷನ್ ಡಿಸೈನರ್ ಮಧು, 9945737427
ಹೆಂಡತಿ ಜತೆ ಏಕಾಂತದಲ್ಲಿ ಇದ್ದಾಗಲೂ ಮನಮೋಹನ ಸಿಂಗ್ ಮಾತನಾಡೋದಿಲ್ಲವಾ?
ಮಾತನಾಡಿದರೆ ತನ್ನ ಮನೆಯವರೇ ಹೌದೋ ಅಲ್ಲವೋ ಎಂಬ ಅನುಮಾನ ಅವರಿಗೂ ಮೂಡಬಹುದೇನೋ?
ಫ್ಯಾಷನ್ ಡಿಸೈನರ್ ಮಧು
ಗಂಡನ ಜೇಬಿನಲ್ಲಿ 'ಲಂಚ'ದ ಹಣ ಕಂಡ ದಿನ, ಹೆಂಡತಿ 'ಮಂಚ'ವನ್ನು ಘಮ-ಘಮಿಸುವಂತೆ ಶೃಂಗರಿಸುತ್ತಾಳಂತೆ?
'ಲಂಚದಿಂದ ಮಂಚದೆಡೆಗೆ' ಅಂತ ಪುಸ್ತಕ
ಬರೆಯಬಹುದು!
ಜಿ.ಎಂ. ರಾಜಶೇಖರ, ದಾವಣಗೆರೆ
ಬೊಗಳ 'ತಕ್ಕಂತ' ಭಾಷಣಗಳನ್ನು ನಾವು ಕೇಳ 'ತಕ್ಕಂತ' ಶಿಕ್ಷೆ ನಿವಾರಣೆ ಹೇಗೆ?
ಹೋಗ'ತಕ್ಕಂತ' ಕಾರ್ಯಕ್ರಮಗಳನ್ನು ಬಿಟ್ಟು ಮನೆಯಲ್ಲೇ ಇರ'ತಕ್ಕಂತ'ವರಾಗಿ!
- ಬಾಣಭಟ್ಟ