ಹುಡುಗಿಯರಿಗೆ ಪ್ರಾಯದ ವಯಸ್ಸಿನಲ್ಲಿಯೇ ಕಿವಿ ಕೇಳಿಸೋದಿಲ್ಲವಲ್ಲ ಯಾಕೆ?
ಎಸ್. ರಾಘವೇಂದ್ರ ಕೃಷ್ಣಮೂರ್ತಿಪುರಂ, ಮೈಸೂರು
ಭಟ್ರೇ ನೀವು ಪ್ರತಿ ಬಾರಿ ವಿಮಾನ ಹತ್ತುವ ಮುಂಚೆ ಓದುಗರಿಗೆ ನಿಮ್ಮ ವಿದೇಶ ಪ್ರಯಾಣದ ಸುಳಿವು ಬಿಟ್ಟುಕೊಡುತ್ತೀರಲ್ಲ ಯಾಕೆ?
ನನ್ನೊಟ್ಟಿಗೆ ಓದುಗರನ್ನೂ ವಿದೇಶಕ್ಕೆ ಕರೆದೊಯ್ಯುವ ಹುನ್ನಾರವಿದು.
ಗೊರೂರು ನಾಗ, 9480783803
ಹುಡುಗಿಯರಿಗೆ ಪ್ರಾಯದ ವಯಸ್ಸಿನಲ್ಲಿಯೇ ಕಿವಿ ಕೇಳಿಸೋದಿಲ್ಲವಲ್ಲ ಯಾಕೆ?
ಅವರು ಸದಾ ಇಯರ್ ಫೋನ್ ಹೊಕ್ಕೊಂಡಿರೋದ್ರಿಂದ!
ಪಲ್ಲವಿ ಚಿತ್ರದುರ್ಗ
ಬದುಕು ನಿಂತ ನೀರಾಯಿತು ಅನ್ನಿಸಿದಾಗ ಏನು ಮಾಡುತ್ತೀರಿ?
ಸ್ವಲ್ಪ ವಿಸ್ಕಿ ಸೇರಿಸಿದರೆ ಆಯ್ತು!
ಗೊರೂರು ನಾಗ, 9480783803
ಹುಡುಗಿಯರ ಮೊಬೈಲ್ಗೆ ಕರೆನ್ಸಿ ಹಾಕಿಸೋ ಪ್ರಾಮಾಣಿಕ ಹುಡುಗರೇ ಯಾಕೆ ಪ್ರೇಮದ ವಿಷಯದಲ್ಲಿ ಮೋಸ ಹೋಗ್ತಾರೆ?
ಮೊದಲು ಕರೆನ್ಸಿ, ಹುಡುಗಿ ಕೈಕೊಟ್ಟ ಮೇಲೆ 'ಕೆರೆ'ನ್ಸಿ!
ವೀಣಾ ರಾಮ್, ಮಂಡ್ಯ
ಗೊರೂರು ನಾಗನ ತುಂಟ ಮನಸ್ಸಿಗೆ ವಯಸ್ಸೆಷ್ಟಾಗಿದೆ?
ಅವರು ಬಿಡದಿ ಸ್ವಾಮಿ ಥರ. ಮನಸ್ಸು 10 ದಾಟೇ ಇಲ್ಲ!
ಬಾಣಭಟ್ಟ