ಕೇಳ್ರಪ್ಪೋದ ಉತ್ತಮ ಪ್ರಶ್ನೆಗೆ ಬಹುಮಾನ ನೀಡಬಹುದಿತ್ತಲ್ಲ?
ಡಾ. ವಿ. ಪುಗಳೇಂದಿ, ಬಳ್ಳಾರಿ 9483980348
ಜನಸಾಮಾನ್ಯರನ್ನು ಮನೆಯೊಳಗೆ ಸೇರಿಸಿಕೊಳ್ಳದವರು ಜನಾರ್ದನನಿಗೆ ಚಿನ್ನವನ್ನು ಕಾಣಿಕೆಯಾಗಿ ನೀಡುತ್ತಾರಲ್ಲ.
ಅದನ್ನೇ ಪ್ರಾಯಶ್ಚಿತ್ತ ಎಂದುಕೊಂಡಿದ್ದಾರೆ ಅವರು.
ವಿ. ಹೇಮಂತಕುಮಾರ, 9916707979
ರಾತ್ರಿಯಾಗುತ್ತಿದ್ದಂತೆ ರನ್ನ ಚಿನ್ನ ಎನ್ನುವ ನನ್ನವಳು ಬೆಳಗಾಗುತ್ತಿದ್ದಂತೆ ಮೂತಿ ತಿವಿಯುತ್ತಾಳಲ್ಲ?
ರಾತ್ರಿ ಎಂಬುದು ಕೆಲವರಿಗೆ ಕನಸು, ಹಗಲು ವಾಸ್ತವ!
ಕುಬೇರಪ್ಪ ಎಂ ವಿಭೂತಿ, ಹರಿಹರ
ಬಾಲಬಡುಕ ಜನರ ಬಾಲ ಕತ್ತರಿಸುವ ಕತ್ತರಿ ನಿಮ್ಮಲ್ಲುಂಟಾ?
ಅಂಥವರ ಬಾಲ ಅಲ್ಲಾಡಿಸುವ ಕ್ರಿಯೆಯನ್ನು ಆಸ್ವಾದಿಸಬೇಕು. ಕತ್ತರಿಸುವುದಕ್ಕೆ ಹೋಗಿ ಕೈ ಹೊಲಸು ಮಾಡಿಕೊಳ್ಳಬಾರದು.
ರಮೇಶ್‌ಭಟ್ ಆವರ್ಸೆ, 9164276058
ಕೇಳ್ರಪ್ಪೋದ ಉತ್ತಮ ಪ್ರಶ್ನೆಗೆ ಬಹುಮಾನ ನೀಡಬಹುದಿತ್ತಲ್ಲ?
ಮಾನ ಉಳಿಸೋದೆ ಹೆಚ್ಚು, ಬಹುಮಾನ ಬೇರೆ ಯಾಕೆ?
ಕಾಳೀಹುಂಡಿ ಶಿವಕುಮಾರ್, ಮೈಸೂರು
ಸಿನಿಮಾದವರಿಗೆಲ್ಲ ರಾಜಕೀಯ ಏಕೆ ಬೇಕು?
ರಾಜಕಾರಣವೂ ನಟನೆಗಿರುವ ವಿಶಾಲ ವೇದಿಕೆಯೇ ಅಲ್ಲವೇ?
ಬಾಣಭಟ್ಟ