ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಜಿ.ಪಿ.ರಾಜರತ್ನಂ ಎಂಬೆಂಗೇಜಿನವರು

Mainashree
Updated On : 15 Sept 2013, 9:38 am

ಜಿ.ಪಿ.ರಾಜರತ್ನಂ  ಉತ್ತಮ ಉಪನ್ಯಾಸಕರೆಂದು ಹೆಸರು ಗಳಿಸಿದ್ದರು. ಅವರು ಪಾಠಮಾಡುವ ವೈಖರಿ, ವಿದ್ಯಾರ್ಥಿಗಳ ಬಗೆಗಿನ ಅವರ ಕಾಳಜಿ, ವಿಷಯ ನಿರೂಪಣೆ, ಎಲ್ಲಕ್ಕಿಂತ ಹೆಚ್ಚು ಅವರ ಕಂಚಿನ ಕಂಠ ವಿದ್ಯಾರ್ಥಿಗಳಿಗೆ ತುಂಬಾ ಪ್ರಿಯವಾದ ವಿಷಯವಾಗಿತ್ತು. ವಿದ್ಯಾರ್ಥಿಗಳ ಬಗ್ಗೆ ಪ್ರೀತಿ ಇದ್ದರೂ ತರಗತಿಯಲ್ಲಿ ಅಶಿಸ್ತನ್ನು ಎಂದಿಗೂ ಸಹಿಸುತ್ತಿರಲಿಲ್ಲ. ಹಾಗೇನಾದರೂ ಅಶಿಸ್ತನ್ನು ತೋರುವ ವಿದ್ಯಾರ್ಥಿಗಳಿಗೆ ಚುರುಕುಮುಟ್ಟಿಸಲು ಹಿಂದೆಮುಂದೆ ನೋಡುತ್ತಿರಲಿಲ್ಲ. ಒಮ್ಮೆ ರಾಜರತ್ನಂ ಅವರು ತರಗತಿಗೆ ಬಂದು ನೋಡುತ್ತಾರೆ. ಕಪ್ಪುಹಲಗೆಯ ಮೇಲೆ ಹೀಗೆ ದೊಡ್ಡ ಅಕ್ಷರಗಳಲ್ಲಿ ಬರೆದಿತ್ತು-
"ಜಿ.ಪಿ.ರಾಜರತ್ನಂ ಎಂಬೆಂಗೇಜಿನವರು(ಎಂಬ ಎಂಗ್ ಏಜಿನವರು)
ಕನ್ನಡ ಪದಗಳ ಬರೆದಿಹರಂತೆ
ಪದರೇಜಿನಿಂದಲೇ ಸೃಷ್ಟಿಯಾಗಿಹರಂತೆ
ಪೂರ್‌ಯಂಗ್‌ಚಾಪ್‌"
ತರಗತಿಗೆ ಬಂದ ರಾಜರತ್ನಂ ಅದನ್ನು ನೋಡಿದವರೇ, ಸಿಟ್ಟಿನಿಂದ ಮುಖ ಕೆಂಪಗೆ ಮಾಡಿಕೊಂಡು "ಯಾರ್ರೀ ಇದನ್ನು ಬರೆದವರು? ಧೈರ್ಯ ಇದ್ದರೆ, ಎದ್ದು ನಿಲ್ಲಿ" ಎಂದು ಗುಡುಗಿದರು. ಇಡೀ ತರಗತಿಯಲ್ಲಿ ಸದ್ದಡಗಿ ಒಂದು ಕ್ಷಣ ಮೌನ ಆವರಿಸಿತು. ಕೊನೆಗೆ ಹಿಂದಿನ ಬೆಂಚಿನಲ್ಲಿದ್ದ ಒಬ್ಬ ಪೀಚು ವಿದ್ಯಾರ್ಥಿ- ಆನವಟ್ಟಿಯ ನಾಡಿಗ ಕೃಷ್ಣಮೂರ್ತಿ ಎದ್ದು ನಿಂತರು. ಕೋಪದಿಂದ ಕುದಿಯುತ್ತಿದ್ದ ರಾಜರತ್ನಂ ಆ ವಿದ್ಯಾರ್ಥಿಯನ್ನು ನೋಡಿದವರೇ ಒಮ್ಮೆಲೇ ಗಹಗಹಿಸಿ ನಕ್ಕರು. ತರಗತಿ ಮುಗಿದ ನಂತರ ತಮ್ಮ ಕೊಠಡಿಗೆ ಬರಲು ತಿಳಿಸಿದರು.
 ಕೊಠಡಿಗೆ ಬಂದ ಕೃಷ್ಣಮೂರ್ತಿಯ ಕಷ್ಟ ಕಾರ್ಪಣ್ಯಗಳನ್ನು ವಿಚಾರಿಸಿ ಅವರು ವಾರಾನ್ನ ಮಾಡಿಕೊಂಡು ವಿದ್ಯಾರ್ಜನೆ ಮಾಡುತ್ತಿರುವ ವಿಷಯ ಮತ್ತು ಶುಕ್ರವಾರ ಮಾತ್ರ ವಾರದ ದಿನ ಸಿಗದ ವಿಚಾರ ಎಲ್ಲವನ್ನೂ ಕೇಳಿ ತಿಳಿದುಕೊಂಡರು. ಅವರಿಗೆ ಪಿಚ್ಚೆನಿಸಿತು. ನಂತರ ಪ್ರತಿ ಶುಕ್ರವಾರ ತಾವು ಎರಡು ರುಪಾಯಿಗಳನ್ನು ನೀಡುವುದಾಗಿಯೂ ಅದನ್ನು ಕೊಟ್ಟು ಹೊಟೇಲಿನಲ್ಲಿ ಊಟಮಾಡಲು ವ್ಯವಸ್ಥೆ ಮಾಡಿದರು. ಅಲ್ಲೇ ಇದ್ದ ವೀ.ಸೀ. ಯವರ ಮೂಲಕ ಫ್ರೀಷಿಪ್ಪಿಗೆ ಶಿಫಾರಸು ಮಾಡಿಸಿದರು. ತುಂಟತನ ಮಾಡಿದರೂ ರಾಜರತ್ನಂ ಅವರ ಶಿಷ್ಯ ವಾತ್ಸಲ್ಯದಿಂದಾಗಿ ವಿದ್ಯಾರ್ಥಿಯ ಸಮಸ್ಯೆ ಬಗೆಹರಿಯಿತಲ್ಲದೆ, ತುಂಟತನವೂ ಬಂದಾಯಿತು.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments