ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಮಯ ಉಳಿಸುವ ಸೂಪರ್‌ಫಾಸ್ಟ್ ಬೇಕು

Vishwanath S
Updated On : 26 Sept 2013, 11:42 am

ಸದ್ಯ ಬಿಜಾಪುರದಿಂದ ಬೆಂಗಳೂರಿಗೆ ಎರಡು ರೈಲುಗಳು ಓಡಾಡುತ್ತಿದ್ದು, ಒಂದು ಬಸವ ಎಕ್ಸ್‌ಪ್ರೆಸ್ ವಯಾ ಸೊಲಾಪುರ ಗುಂತಕಲ್ ಮಾರ್ಗವಾಗಿ 763ಕಿಮಿ ದೂರವನ್ನು 17 ಗಂಟೆಗಳಲ್ಲಿ ಕ್ರಮಿಸುತ್ತದೆ, ಇನ್ನೊಂದು ಗೊಲಗುಂಬಜ್ ಎಕ್ಸ್‌ಪ್ರೆಸ್ ರೈಲು  ವಯಾ ಹುಬ್ಬಳ್ಳಿ ಅರಸಿಕೆರೆ ಮಾರ್ಗವಾಗಿ 712ಕಿಮಿ ದೂರ 15 ಗಂಟೆಗಳಲ್ಲಿ ಕ್ರಮಿಸಿ ಬೆಂಗಳೂರನ್ನು ಸೇರುತ್ತದೆ. ಆದರೆ ಬಿಜಾಪುರದಿಂದ ಗದಗ ಗುಂತಕಲ್ ಮಾರ್ಗವಾಗಿ 675ಕಿಮಿ ದೂರದ ಬೆಂಗಳೂರನ್ನು ತಲುಪಲು ಕೇವಲ 12 ರಿಂದ 13 ಗಂಟೆ ಸಾಕು. ಅದರಂತೆ ದೂರದ ಬೀದರ್, ಮೀರಜ್ ಹಾಗೂ ಸೋಲಾಪುರಗಳಿಂದ ಬೆಂಗಳೂರಿಗೆ ಕ್ರಮವಾಗಿ 737ಕಿಮಿ, 743ಕಿಮಿ, 654ಕಿಮಿಗಳನ್ನು ಕೇವಲ 12 ರಿಂದ 13 ಗಂಟೆಗಳಲ್ಲಿ ಚಲಿಸುವ ಸೂಪರ್ ಫಾಸ್ಟ್ ರೈಲುಗಳನ್ನು ಬಿಡಲಾಗಿದೆ. ಆದ್ದರಿಂದ ಬಿಜಾಪುರ ಹಾಗು ಬಾಗಲಕೋಟೆ ಜಿಲ್ಲೆಯ ಜನರ ಆಸೆಯಂತೆ ಇನ್ನೊಂದು ಸೂಪರ್ ಫಾಸ್ಟ್ ರೈಲನ್ನು ಅಥವಾ ಬಸವ ಎಕ್ಸ್‌ಪ್ರೆಸ್ ರೈಲನ್ನು ಸೋಲಾಪುರದಿಂದ ಬಿಜಾಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ಗುಂತಕಲ್ ಮಾರ್ಗವಾಗಿ ಬೆಂಗಳೂರಿಗೆ ಬಿಡಬಹುದು. ಸಮಯದ ಉಳಿತಾಯದ ಜೊತೆಗೆ ವಯಸ್ಸಾದವರಿಗೆ, ಹೆಣ್ಣುಮಕ್ಕಳಿಗೆ, ವ್ಯಾಪಾರಸ್ಥರಿಗೆ ಎಲ್ಲರಿಗೂ ಅನುಕೂಲ. ನೈಋತ್ಯ ರೇಲ್ವೆ ಅಧಿಕಾರಿಗಳು ಕೇಂದ್ರ ರೈಲ್ವೆ ಸಚಿವರು ಇದರ ಬಗ್ಗೆ ಸ್ವಲ್ಪ ಗಮನಹರಿಸಲಿ.
- ಎಸ್. ಎಸ್. ಪಾಟೀಲ, ಬಿಜಾಪುರ

ಇದೊಂದು ಲಾಭದಾಯಕ ವ್ಯಾಪಾರ
ಮಂಗಳೂರಿನ ಸುರತ್‌ಕಲ್‌ನಲ್ಲಿ ದನಗಳ್ಳರ ಒಂದು ಗುಂಪು ಸಿಕ್ಕಿ ಬಿದ್ದಿದೆ. ವಿಚಾರಣೆಯ ವೇಳೆ ದನಗಳ್ಳರೇ ಹೇಳಿರುವಂತೆ ಹಿಂದಿನ ಎರಡೇ ವರ್ಷದಲ್ಲಿ ಅವರು ನಾಲ್ಕು ಸಾವಿರಕ್ಕೂ ಹೆಚ್ಚು ದನಗಳನ್ನು ಕಳ್ಳತನ ಮಾಡಿ ಉಳ್ಳಾಲದ ಆಕ್ರಮ ಕಸಾಯಿಖಾನೆಗೆ ಮಾರಿದ್ದಾರೆ ಹಾಗೂ ಒಂದು ಆಕಳಿಗೆ ಅವರಿಗೆ ಕನಿಷ್ಠ ಐದು ಸಾವಿರ ರುಪಾಯಿ ಸಿಕ್ಕಿದೆಯಂತೆ. ಅಂದರೆ 4000 ಆಕಳಿಗೆ ಇವರಿಗೆ ಸಿಕ್ಕ ಹಣ ಎರಡು ಕೋಟಿ ರುಪಾಯಿ! ಎರಡು ಕೋಟಿ ಸಂಪಾದನೆ ಕೇವಲ ಎರಡೇ ವರ್ಷದಲ್ಲಿ  ಅಂದರೆ ಐದು ಜನರ ಗ್ಯಾಂಗಿಗೆ ತಲಾ 40 ಲಕ್ಷ, ಅದೂ ಟಾಕ್ಸ್ ಫ್ರೀ! ಒಂದು ಆಕಳು ಕನಿಷ್ಠ 200-300 ಕೆ.ಜಿ ತೂಗುತ್ತದೆ,  ಒಂದು ಕೆ.ಜಿ ಗೆ 100 ರುಪಾಯಿಯಂತೆ ಅಕ್ರಮ ಕಸಾಯಿಯೂ ಒಂದು ಆಕಳಿಗೆ 30 ಸಾವಿರ ಕಮಾಯಿಸುತ್ತಾನೆ. ಅಂದರೆ ನಾಲ್ಕು ಸಾವಿರ ಆಕಳಿಗೆ ಅವನ ಕಮಾಯಿ 12 ಕೋಟಿ ರುಪಾಯಿ. ಅದರಲ್ಲಿ ಎರಡು ಕೋಟಿ ಅವನು ದನಗಳ್ಳರಿಗೆ ಕೊಟ್ಟಾಗಿದೆ,  ಇನ್ನುಳಿದ ಹತ್ತು ಕೋಟಿಯಲ್ಲಿ ಅವನು ಸ್ಥಳೀಯ ಪೊಲೀಸರಿಗೆ, ಶಾಸಕರಿಗೆ, ಕಾರ್ಪೊರೇಟರಿಗೆ ಒಟ್ಟು ಐದು ಕೋಟಿ ಕೊಟ್ಟರೂ ಅವನಿಗೆ ಉಳಿಯುವುದು ನಿವ್ವಳ ಐದು ಕೋಟಿ ರುಪಾಯಿ. ಎರಡೇ ವರ್ಷದಲ್ಲಿ ಇಷ್ಟೊಂದು ಲಾಭ ಯಾವ ವ್ಯಾಪಾರದಲ್ಲಿದೆ? ಪೊಲೀಸರು ಮತ್ತು ಸೆಕ್ಯುಲರ್ ರಾಜಕಾರಣಿಗಳು ಇಷ್ಟೊಂದು ಲಾಭದಾಯಕ ವ್ಯಾಪಾರಕ್ಕೆ ರಕ್ಷಣೆ ಕೊಡದೇ ಜುಜುಬಿ ಆಕಳಿಗೆ ರಕ್ಷಣೆ ಕೊಡುವಂಥ ಮೂರ್ಖರಲ್ಲ!    
-ರಾಮಕೃಷ್ಣ. ಎ. ಕೆ, ಮಂಗಳೂರು


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement