ರಾಹುಲ್: ನಾನು ಇವತ್ತು ಎರಡು ಗಂಟೆಗೆ ಊಟ ಮಾಡ್ತೀನಿ...
ರಾಹುಲ್: ನಾನು ಇವತ್ತು ಎರಡು ಗಂಟೆಗೆ ಊಟ ಮಾಡ್ತೀನಿ. ನೀವೇನ್ ಮಾಡ್ತೀರಿ? ಕಾಂಗ್ರೆಸ್ ಮುಖಂಡರು: ನಾವೂ ಊಟ ಮಾಡ್ತೀವಿ, ನಾವೂ ಊಟ ಮಾಡ್ತೀವಿ....!
-ಕೂಲ್ಫನ್ನಿಟೀಶರ್ಟ್
ಮೊಬೈಲ್ನಲ್ಲಿ ಕಿವಿಗೆ ಅತ್ಯಂತ ಕಠೋರವಾಗಿ ಅಪ್ಪಳಿಸುವ ಸಂಗೀತವೆಂದರೆ 'ಬ್ಯಾಟರಿ ಲೋ' ಆಗಿದ್ದರ ಸೂಚನೆ.
-ಗಬ್ಬಾರ್ ಸಿಂಗ್
ಬರಾಕ್ ಒಬಾಮಾ ನಮ್ಮ ಪ್ರಧಾನಿಗೆ ಮಾಡಿರಬಹುದಾದ ಎಸ್ಸೆಮ್ಮೆಸ್: ನಮ್ಮ ಮೀಟಿಂಗ್ ಅನ್ನು ನಾನ್ಸೆನ್ಸ್ ಅಲ್ಲದ್ದು ಅಂತ ರಾಹುಲ್ ಕ್ಲಿಯರ್ ಮಾಡಿಯಾಗಿದೆ ತಾನೇ?
-ಮ್ಯಾಂಗೊಮ್ಯಾನ್
ಅಂತೂ ಸುಪ್ರೀಂಕೋರ್ಟ್ 'ರಿಜೆಕ್ಟ್ ಮಾಡುವ ಹಕ್ಕು' ಗಟ್ಟಿ ಮಾಡಿದೆ. ಆದರೆ ಭಾರತದ ಹುಡುಗಿಯರು, ಹುಡುಗರ ವಿಷಯದಲ್ಲಿ ಇದನ್ನು ಲಾಗಾಯ್ತಿನಿಂದಲೇ ಜಾರಿಗೆ ತಂದಿದ್ದಾರೆ!
-ರವೀಂದ್ರ ರಜಪೂತ್