ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಆ ಜೋಡು ಧರಿಸುವ ಯೋಗ್ಯತೆ ನನಗಿಲ್ಲ

Vishwanath S
Updated On : 30 Sept 2013, 11:08 am

ಫೀಲ್ಡ್ ಮಾರ್ಷಲ್ ಜನರಲ್ ಸ್ಮಟ್ಸ್‌ನ ಹೆಸರು ಬ್ರಿಟನ್ ಇತಿಹಾಸದಲ್ಲಿ ಅಜರಾಮರ. ದಕ್ಷಿಣ ಆಫ್ರಿಕಾದ ಪ್ರಧಾನ ಮಂತ್ರಿಯಾಗಿ, ತತ್ವಜ್ಞಾನಿಯಾಗಿ, ಮಿಲಿಟರಿ ಅಧಿಕಾರಿಯಾಗಿ ಅವನು ಪ್ರಸಿದ್ಧನಾಗಿದ್ದನು. 1913-14ರ ಸಮಯದಲ್ಲಿ ಗಾಂಧೀಜಿಯವರು ಸತ್ಯಾಗ್ರಹದ ಮೂಲಕ ದಕ್ಷಿಣ ಆಫ್ರಿಕನ್ನರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದಾಗ ಜ. ಸ್ಮಟ್ಸ್ ಅಧಿಕಾರದಲ್ಲಿದ್ದರು. ಬೋಯರ್ ಯುದ್ಧದ ಸಮಯದಲ್ಲಿ ಬ್ರಿಟಿಷ್ ಗಾಯಾಳುಗಳಿಗೆ ನೆರವಾಗುವ ನಿಟ್ಟಿನಲ್ಲಿ ಒಂದು ಸ್ವಯಂಸೇವಕರ ದಳವನ್ನು ಗಾಂಧೀಜಿ ಸ್ಥಾಪಿಸಿದ್ದರು. ಬ್ರಿಟಿಷರ ವಿರುದ್ಧ ಚಳುವಳಿ ಮಾಡಿದರೂ, ಕಷ್ಟದ ಸಮಯದಲ್ಲಿ ಚಳವಳಿ ನಿಲ್ಲಿಸಿ ಬ್ರಿಟಿಷ್ ಗಾಯಾಳುಗಳ ಬಗ್ಗೆ ಗಾಂಧೀಜಿ ತೋರಿದ ಅನುಕಂಪ ನೋಡಿ ಸ್ಮಟ್ಸ್‌ಗೆ ಅವರ ಬಗ್ಗೆ ಗೌರವ ಹುಟ್ಟಿಕೊಂಡಿತು. ಯುದ್ಧಾ ನಂತರ ಗಾಂಧೀಜಿ ಮತ್ತೆ ಬ್ರಿಟೀಷರ ವಿರುದ್ಧ ಹೋರಾಟ ಪ್ರಾರಂಭಿಸಿದರು.
ಶಾಂತಿಯುತ ಚಳವಳಿ ಮಾಡುತ್ತಿದ್ದ ಗಾಂಧೀಜಿಯವರ ಮೇಲೆ ಕೈ ಮಾಡಲು ಸ್ಮಟ್ಸ್ ಇಷ್ಟಪಡುತ್ತಿರಲಿಲ್ಲ. ಆದರೆ ಈ ಚಳವಳಿಯನ್ನು ಹತ್ತಿಕ್ಕುವ ಜವಾಬ್ದಾರಿಯೂ ಅವರಿಗಿತ್ತು. ಹಿಂಸಾತ್ಮಕ ಚಳವಳಿಯನ್ನು ಸಂಘಟಿಸಿದ್ದರೆ, ಉಗ್ರ ಶಿಕ್ಷೆ ನೀಡಲು ಸಾಧ್ಯವಾಗುತ್ತಿತ್ತು ಎಂದು ಸ್ಮಟ್ಸ್ ಆಗಾಗ ಅಂದುಕೊಳ್ಳುತ್ತಿದ್ದರು. ಆದರೂ ಕಾನೂನು ಪ್ರಕಾರ ಗಾಂಧೀಜಿಯವರನ್ನು ಸೆರೆಮನೆಗೆ ಕಳುಹಿಸಿ ಶಿಕ್ಷಿಸಿದರು. ಕೊನೆಗೆ ಗಾಂಧೀಜಿ ಜೈಲಿನಿಂದ ಬಿಡುಗಡೆಯಾದಾಗ, ಸೆರೆಮನೆಯಲ್ಲಿ ತಾವೇ ತಯಾರಿಸಿದ ಮೃದುವಾದ ಚಪ್ಪಲಿಯನ್ನು ಜನರಲ್ ಸ್ಮಟ್ಸ್‌ಗೆ(ಅವರ ಜನ್ಮದಿನದ ಉಡುಗೊರೆಯಾಗಿ) ನೀಡಿದರು.
ನಂತರ ಕೆಲಕಾಲದಲ್ಲಿ ಭಾರತಕ್ಕೆ ಮರಳಿದರು. ಅದಾಗಿ 24 ವರ್ಷಗಳ ನಂತರ 1939ರಲ್ಲಿ ಗಾಂಧೀಜಿಯವರ ಜನ್ಮದಿನದಂದು ಸ್ಮಟ್ಸ್ ಒಂದು ಸಂದೇಶ ಮತ್ತು ಉಡುಗೊರೆಯೊಂದನ್ನು ಕಳುಹಿಸಿದ. ಆತ ಕಳುಹಿಸಿದ ಸಂದೇಶದಲ್ಲಿ ಹೀಗೆ ಬರೆಯಲಾಗಿತ್ತು, "ನೀವು ಭಾರತಕ್ಕೆ ಮರಳುವಾಗ ನೀಡಿದ ಉಡುಗೊರೆ ನನಗೆ ತುಂಬಾ ಪ್ರಿಯವಾದದ್ದು. ಅದನ್ನು ಇದುವರೆಗೂ ನಿಮ್ಮ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ. ತಮ್ಮಂಥ ಮಹಾತ್ಮರು ಕೊಟ್ಟ ಜೋಡಿನ ಮೇಲೆ ನಿಂತುಕೊಳ್ಳುವ ಯೋಗ್ಯತೆ ನನಗಿಲ್ಲ. ಆದರೆ ನಿಮ್ಮಂಥವರನ್ನೂ ಸೆರೆಮನೆಗೆ ತಳ್ಳುವುದು ನನ್ನ ಹಣೆಬರಹವಾಗಿತ್ತು ಎಂಬುದು ದುರ್ದೈವದ ಸಂಗತಿ."



 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments