ಕೋಲ್ಯ ದೇವರಲ್ಲಿ ಪ್ರಾರ್ಥಿಸಿದ: "ಹೇ ದಯಾಮಯಿ ಪ್ರಭು...
ಕೋಲ್ಯ ದೇವರಲ್ಲಿ ಪ್ರಾರ್ಥಿಸಿದ: "ಹೇ ದಯಾಮಯಿ ಪ್ರಭು...ನಾನು ಸ್ವಾರ್ಥಿಯಲ್ಲ. ನಾನು ನನಗಾಗಿ ಎಂದಿಗೂ ನಿನ್ನ ಬಳಿ ಏನನ್ನೂ ಬೇಡಿಲ್ಲ. ಈಗಲೂ ಬೇಡುವುದಿಲ್ಲ. ನನಗೇನೂ ಬೇಡ, ಆದರೆ ನನ್ನ ತಾಯಿಯನ್ನು ನಾನು ತುಂಬಾ ಪ್ರೀತಿಸುತ್ತೇನೆ. ಹಾಗಾಗಿ ಆಕೆಗೋಸ್ಕರ ಒಂದು ವರವನ್ನು ಕೇಳುತ್ತೇನೆ. ಇಲ್ಲ ಅನ್ನಬೇಡ"
ದೇವರು(ಭಾವುಕನಾಗಿ): ಕೇಳು ಭಕ್ತ ಕೇಳು...
ಕೋಲ್ಯ: ನನ್ನ ತಾಯಿಗೆ...
ದೇವರು: ಹೂಂ ಹೇಳು...ಏನು ನಿನ್ನ ತಾಯಿಗೆ? ಏನು ಕೊಡಲಿ?
ಕೋಲ್ಯ: ನನ್ನ ತಾಯಿಗೆ ಸುಂದರ, ಸೆಕ್ಸಿ ಸೊಸೆಯನ್ನು ಕೊಡು ಪ್ರಭು!!
***
ಮನೆಯಲ್ಲಿ ನವಜೋತ್ ಸಿಂಗ್ ಸಿಧು ಪೋಸ್ಟರ್ ತೂಗುಹಾಕಿದ್ದ ಮಗನಿಗೆ ಅಪ್ಪ ವಿಚಾರಿಸಿದ- 'ಏನೋ ಇದು ಜಗುಲಿಯಲ್ಲೇ ಇಷ್ಟು ದೊಡ್ಡ ಚಿತ್ರ ಈ ವ್ಯಕ್ತಿಯದ್ದು?'
ಮಗ- ಅಂಗಡಿಗೆ ಹೋಗಿ 'ಲಾಫಿಂಗ್ ಬುದ್ಧ' ಕೊಡಿ, ಶೋಕೇಸ್ನಲ್ಲಿಡೋದಕ್ಕೆ ಅಂತ ಕೇಳ್ದೆ. ಅಂಗಡಿಯವ ಇದು ಅದರ ಲೇಟೆಸ್ಟ್ ಅವತಾರ ಅಂತ ಕೊಟ್ಟ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.