ಸಂಪಾದಕೀಯ

ಅಧಿಕಾರಕ್ಕೆ ಅಂಟಿಕೊಳ್ಳದ ನಿಷ್ಠಾವಂತ

ಒಮ್ಮೆ ಅಧಿಕಾರದ ಗದ್ದುಗೆಗೇರಿದರೆ ಸಾಕು ಅದನ್ನು ಭದ್ರವಾಗಿ ಹಿಡಿದು ಕುಳಿತುಕೊಳ್ಳುವ ರಾಜಕಾರಣಿಗಳನ್ನು ನೋಡಿದ್ದೇವೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ, ಯಾವ ಮಾರ್ಗವನ್ನಾದರೂ ಹಿಡಿಯುವ ಧುರೀಣರ ಉದಾಹರಣೆಗಳು ನಮ್ಮಲ್ಲಿವೆ. ಆದರೆ, ಬಾಳಾಸಾಹೇಬ್ ಗಂಗಾಧರ್ ಖೇರ್ ಇದಕ್ಕೆ ಅಪವಾದವಾಗಿದ್ದವರು. ಅವರು ಬಾಲ್ಯದ ಕೆಲವು ದಿನಗಳನ್ನು ಕುಂದಗೋಳದಲ್ಲಿ ಕಳೆದಿದ್ದರು. ಬಾಲ ಗಂಗಾಧರ ತಿಲಕರ ಬಗ್ಗೆ ಅವರಿಗೆ ಅಪಾರ ಗೌರವವಿತ್ತು. 1937ರಿಂದ 39ರವರೆಗೆ ಮತ್ತು 1946ರಿಂದ 52ರವರೆಗೆ ಮುಂಬೈನ ಮುಖ್ಯಮಂತ್ರಿಗಳಾಗಿದ್ದವರು ಖೇರ್. ಅವರೆಂದೂ ಆ ಸ್ಥಾನವನ್ನು ಬಯಸಿದವರಲ್ಲ. ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೂ ಆಗಿರಲಿಲ್ಲ. ಕೆ.ಎಫ್.ನಾರಿಮನ್ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ ಅನಿರೀಕ್ಷಿತವಾಗಿ ಖೇರರ ಹೆಸರು ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪವಾಗಿ ಅವರು ಅವಿರೋಧವಾಗಿ ಆಯ್ಕೆಯಾದಾಗ ಎಲ್ಲರೂ ಆಶ್ಚರ್ಯಪಟ್ಟಿದ್ದರು. ಮುಖ್ಯಮಂತ್ರಿಗಳಾದ ಮೇಲೆ ಪ್ರಭಾವೀ ಖಾತೆಯನ್ನು ಬಯಸದೆ ಎರಡುಬಾರಿಯೂ ಶಿಕ್ಷಣ ಖಾತೆಯನ್ನು ವಹಿಸಿಕೊಂಡಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದರು. ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿದರು. ಬೆಳಗಾವಿಯಲ್ಲಿ ಶಿಕ್ಷಕರ ತರಬೇತಿ ಕಾಲೇಜನ್ನೂ, ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯವನ್ನೂ ಸ್ಥಾಪಿಸಿದರು. ನಮ್ಮ ಸಂವಿಧಾನ ಜಾರಿಗೆ ಬಂದಮೇಲೆ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ನೆಹರೂರವರು ಎಷ್ಟೇ ಒತ್ತಾಯ ಮಾಡಿದರೂ ಖೇರ್ ವಿಧಾನಸಭೆಗೆ ಮತ್ತೆ ಸ್ಪರ್ಧಿಸಲಿಲ್ಲ. ಅವರ ಉದ್ದೇಶ ರಾಜಕಾರಣಮುಕ್ತವಾಗಿ ಸಮಾಜ ಸೇವೆ ಮಾಡಬೇಕೆಂಬುದಾಗಿತ್ತು. ಆದರೂ ನೆಹರೂ ಖೇರ್ರನ್ನು ಇಂಗ್ಲೆಂಡಿನ ರಾಯಭಾರಿಯನ್ನಾಗಿ ನೇಮಕ ಮಾಡಿದರು. ಆದರೆ ಅಲ್ಲಿಯೂ ಕೇವಲ ಎರಡು ವರ್ಷ ಮಾತ್ರ ಸೇವೆ ಸಲ್ಲಿಸಿ, ತಮ್ಮ ಪತ್ನಿಯ ಅನಾರೋಗ್ಯದ ನೆಪವೊಡ್ಡಿ ಭಾರತಕ್ಕೆ ಹಿಂದಿರುಗಿದರು. ಇಂಗ್ಲೆಂಡಿನಲ್ಲಿದ್ದಾಗ ತಮ್ಮ ಮಗಳನ್ನು ಶಾಲೆಗೆ ತಮ್ಮ ಕಚೇರಿಯ ಕಾರಿನಲ್ಲಿ ಕಳುಹಿಸದೆ, ಬಸ್ನಲ್ಲಿ ಕಳುಹಿಸುತ್ತಿದ್ದರು. ಅವರೆಂದೂ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಲಿಲ್ಲ. ಅತಿ ಸರಳ ಜೀವನವನ್ನು ಬಯಸುತ್ತಿದ್ದ ಖೇರರಿಗೆ ಅಧಿಕಾರ ಎಂಬುದು ಭೋಗದ ಸಾಮಗ್ರಿಯಾಗಲಿಲ್ಲ. ಇಂತಹ ಅಪರೂಪದ ರಾಜಕಾರಣಿಗಳು ಈಗ ತುಂಬಾ ವಿರಳ.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು