ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕರ್ನಾಟಕ ಹೈಕೋರ್ಟ್ ಪರಿಸ್ಥಿತಿ

Vishwanath S
Updated On : 22 Apr 2014, 12:02 pm

ಕರ್ನಾಟಕ ಹೈಕೋರ್ಟಿಗೆ ಈಗ ಅಗತ್ಯವೆನಿಸಿದರೆ ಅರವತ್ತೆರಡು ನ್ಯಾಯಮೂರ್ತಿಗಳನ್ನು ನೇಮಿಸಬಹುದು. ಈಗ ಕೆಲಸ ಮಾಡುತ್ತಿರುವ ನ್ಯಾಯಾಧೀಶರ ಸಂಖ್ಯೆ ಮೂವತ್ತೊಂದು.
ಆದಷ್ಟು ಬೇಗ ಹೈಕೋರ್ಟಿನ ನ್ಯಾಯಮೂರ್ತಿಗಳ ನೇಮಕದ ಪ್ರಕ್ರಿಯೆ ಆರಂಭವಾಗಬೇಕು. ಧಾರವಾಡ- ಗುಲ್ಬರ್ಗಗಳಲ್ಲಿ ಹೈಕೋರ್ಟಿನ ಪೂರ್ಣಪ್ರಮಾಣದ ಪೀಠಗಳು ಮಂಜೂರಾದರೂ, ಅಲ್ಲಿ ಕೆಲಸವನ್ನು ತೀವ್ರಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ರಾಜ್ಯ ಸರ್ಕಾರ, ಹೈಕೋರ್ಟ್ ಹಾಗೂ ಎಲ್ಲ ಆಸಕ್ತ ಹಿತಗಳೂ ಒತ್ತಾಯಪಡಿಸಿದರೂ ಆಗಲೇಬೇಕಾಗಿರುವ ಪೀಠಗಳ ವಿಸ್ತರಣೆಯಿಂದ ಹೈಕೋರ್ಟ್ ವಂಚಿತವಾಗಿರುವಂತೆ ಕಂಡುಬರುತ್ತಿದೆ. ಹೈಕೋರ್ಟ್‌ನ ನ್ಯಾಯಮೂರ್ತಿಗಳ ನೇಮಕದಲ್ಲಿ ಕೆಳಹಂತದ ನ್ಯಾಯಾಲಯಗಳಲ್ಲಿರುವ ನ್ಯಾಯಾಧೀಶರ ಸಮುದಾಯದಿಂದ ಆಯ್ಕೆಯಾಗುವವರ ಜತೆಯಲ್ಲೇ ಅನುಭವ ಪಡೆದ ವಕೀಲರ ಸಮುದಾಯದಿಂದಲೂ ಆಯ್ಕೆ ಮಾಡಲು ಅವಕಾಶವಿದೆ. ಕಳೆದ ಮೂರೂವರೆ ವರ್ಷಗಳಲ್ಲಿ ಹೈಕೋರ್ಟಿನ ವಕೀಲರ ಸಮುದಾಯದಿಂದ ಒಬ್ಬರನ್ನೂ ನೇಮಿಸಿದಂತಿಲ್ಲ. ಇದುವರೆಗೆ ಈ ವಿಚಾರದಲ್ಲಿ ಆಗಿರುವ ವಿಳಂಬವೇ ಸಾಕು. ಆದಷ್ಟು ಬೇಗ ಹೈಕೋರ್ಟಿನ ನ್ಯಾಯಪೀಠಗಳ ಎಲ್ಲ ಕುರ್ಚಿಗಳೂ ಭರ್ತಿಯಾಗುವಂತೆ ನೋಡಿಕೊಳ್ಳಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement