ಸಂಪಾದಕೀಯ

ರಾಜಕಾರಣ

*ಪಾರ್ಟಿಗಾಗಿ ಪಾರ್ಟು ತೊಡುವಿಕೆ
*   ಉಪಾಯದಲ್ಲಿ ಜೀವನ ಮಾಡುವ ಕಲೆಯಿರುವವರು ಇದನ್ನು  ಜೀವನೋಪಾಯವಾಗಿಸಿಕೊಳ್ಳಬಹುದು
*   ಆಳಾಗಿ ದುಡಿಯದೆಯೂ ಅರಸನಾಗಿ ಉಣ್ಣಲು ಇರುವ ಮಾರ್ಗ
*   ದೇಶ ಭಾಷೆ ಗೊತ್ತಿಲ್ಲದಿದ್ದರೂ ದೇಶವಾಳುವ ಅವಕಾಶ ಗಿಟ್ಟಿಸಿಕೊಳ್ಳುವ ಮಾರ್ಗ
*   ಒಳ್ಳೆಯ ಗಳಿಕೆಯುಳ್ಳವ ಟಿಕೆಟ್ ಗಳಿಕೆಯ ಹೆಗ್ಗಳಿಕೆ ಪಡೆಯಬಲ್ಲ
*   ನೈತಿಕತೆಗಳನ್ನೆಲ್ಲ ನೀತಿಕತೆಗಳಿಗೇ ಸೀಮಿತಗೊಳಿಸಿ ಬರಬೇಕಾದ ಕ್ಷೇತ್ರ
*   ಮೂರೂ ಬಿಟ್ಟವರಿಗಿಲ್ಲಿ ಅವಕಾಶ. ಸಂಕೋಚ, ಭಯ ಮತ್ತು ವಿನಯ
*  ಶ್ರೀಮಂತರ ಹವ್ಯಾಸ ಮತ್ತು ಶ್ರೀಮಂತನಾಗಲು ಇರುವ ಶಾರ್ಟ್‌ಕಟ್
*   ಇಲ್ಲಿ ಒಳ್ಳೆಯವರಿದ್ದರೆ ಅದು ಅಪವಾದ ಮತ್ತು ಒಳ್ಳೆಯತನಕ್ಕೇ ಅದು ಅಪವಾದ
*   ಜಾತಿ ಮತದ ಹೊಟ್ಟ ತೂರಿ ಮತದ ಜಾತಿ ಸೃಷ್ಟಿಸುವಿಕೆ
*   ಯಾವ ಬಣದಲ್ಲಿದ್ದರೆ ಝಣ-ಝಣ ಹೆಚ್ಚುವುದೋ ಅಲ್ಲೇ ಅವನ ಋಣ
*   ಹೃದಯದ ಜಾಗದಲ್ಲಿ ಕಿಸೆ ಮತ್ತು ಬುದ್ಧಿಯ ಜಾಗದಲ್ಲಿ ಅವಿವೇಕವುಳ್ಳವನ ಕಾರ್ಯಕ್ಷೇತ್ರ
*   ಜನಸೇವೆಯ ಬೋರ್ಡ್‌ನ ಕೆಳಗೆ ನಡೆಯುವ ವ್ಯವಹಾರ
*   ಸಿದ್ಧಾಂತಗಳಿಗೆ ತರ್ಪಣ ಬಿಡುವ ಶ್ರಾದ್ಧಭೂಮಿ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!