ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹುಸಿ ಜಾತ್ಯತೀತವಾದಿಗಳಿಗೆ ಕೆಲವು ಪ್ರಶ್ನೆಗಳು

Mainashree
Updated On : 23 Apr 2014, 10:05 am

ಪ್ರೊ. ಜಿ.ಹೆಚ್. ನಾಯಕ ಸೇರಿದಂತೆ ಕೆಲ ಹುಸಿ ಜಾತ್ಯತೀತವಾದಿಗಳಿಗೆ ಹಾಗೂ ಕಾಂಗ್ರೆಸ್ ಭಟ್ಟಂಗಿಗಳಿಗೆ ನನ್ನ ಪ್ರಶ್ನೆಗಳು.
1. ಬಿಜೆಪಿಗೆ ಮುಸ್ಲಿಮರ ಬಗ್ಗೆ ದ್ವೇಷ ಇದೆ ಎಂದು ಹೇಳಿರುವಿರಿ. 1999ರಿಂದ 2004ರವರೆಗೆ ವಾಜಪೇಯಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಎಷ್ಟು ಮುಸ್ಲಿಮರ ಹತ್ಯೆಯಾಯಿತು ಎಂದು ಮಾಹಿತಿ ಕೊಡುವಿರಾ ಹಾಗೂ ಅಂದು ಮುಸ್ಲಿಮರು ಭಾರತ ಬಿಟ್ಟು ಬೇರೆ ಯಾವುದಾದರೂ ದೇಶಕ್ಕೆ ವಲಸೆ ಹೋದರೆ ದಯಮಾಡಿ ತಿಳಿಸಿ.
2. ಮೋದಿ ದೇಶನಾಶಕ ಎಂದು ಹೇಳಿರುವಿರಿ, ಹಾಗಾದರೆ ಕಳೆದ 12 ವರ್ಷದಿಂದ ಗುಜರಾತಿನಲ್ಲಿ ಎಷ್ಟು ದೇಶನಾಶಕ ಪ್ರಕರಣಗಳು ನಡೆದಿವೆ ಎಂದು ಮಾಹಿತಿ ನೀಡುವಿರಾ? (ಸುಮಾರು 12 ವರ್ಷಗಳಿಂದ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿರುವ ಮೋದಿಯವರು ಮುಸ್ಲಿಮರ ದ್ವೇಷಿಯಾಗಿದ್ದರೆ ಈ ಹೊತ್ತಿಗಾಗಲೇ ಒಬ್ಬ ಮುಸ್ಲಿಂ ಕೂಡ ಬದುಕಿ ಉಳಿಯಲಾಗುತ್ತಿರಲಿಲ್ಲ. ಆದರೆ ವಾಸ್ತವವೇನೆಂದರೆ ಭಾರತದ ಉಳಿದ ಎಲ್ಲಾ ರಾಜ್ಯಗಳ ಮುಸ್ಲಿಮರಿಗಿಂತ ಗುಜರಾತ್‌ನಲ್ಲಿ ಮುಸ್ಲಿಮರ ಸ್ಥಿತಿ ಉತ್ತಮವಾಗಿದೆ ಎಂದು ಕೇಂದ್ರ ಸರ್ಕಾರದ ಒಂದು ವರದಿ ತಿಳಿಸುತ್ತದೆ).
2. ಇಂದಿರಾಗಾಂಧಿ ಅಣುಪರೀಕ್ಷೆ ನಡೆಸಿದರೆ, ಅವರು ನಿಮ್ಮಂತಹ ಭಟ್ಟಂಗಿಗಳಿಗೆ ಕಾಳಿಕಾಮಾತೆಯ ಸ್ವರೂಪ. ಅದೇ ವಾಜಪೇಯಿ ಅಣು ಪರೀಕ್ಷೆ ನಡೆಸಿದರೆ ಅದು ಅವಿವೇಕ ಎಂದು ಹೇಳುವ ನಿಮ್ಮ ಮನೋವ್ಯಾಧಿಗೆ ಏನು ಹೇಳಬೇಕು?
4. ಇನ್ನು ಗುಜರಾತ್ ಹತ್ಯಾಕಾಂಡದ ಬಗ್ಗೆ ಹೇಳುವುದಾದರೆ ಈ ಹತ್ಯಾಕಾಂಡದ ಮೂಲ ಗೋಧ್ರಾ ಘಟನೆ. ಅಂದು ಕರಸೇವಕರು ಈ ಘಟನೆಯಲ್ಲಿ ಬೆಂಕಿಗೆ ಆಹುತಿಯಾದಾಗ ಅದಕ್ಕೆ ಪ್ರತಿಯಾಗಿ ಈ ಘಟನೆ ನಡೆಯಿತು. ಅಂದು ರೈಲಿನಲ್ಲಿ ಸುಟ್ಟು ಕರಕಲಾದವರ ಬಗ್ಗೆ ಚಕಾರವೆತ್ತದ ನೀವು ನಂತರ ನಡೆದ ಗಲಭೆಯಲ್ಲಿ ಮೃತಪಟ್ಟವರ ಬಗ್ಗೆ ಮರುಕ ತೋರುವುದು ನಿಮ್ಮ ಎಡಬಿಡಂಗಿತನ ತೋರಿಸುತ್ತದೆ. ಹಾಗೂ ಈ ಘಟನೆಯಲ್ಲಿ ಮೋದಿಯವರ ಪಾತ್ರದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ದೊರಕದಿರುವುದರಿಂದ ಸುಪ್ರಿಂಕೋರ್ಟ್ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿರುವುದು ತಮ್ಮ ಗಮನಕ್ಕೆ ಬಂದಿಲ್ಲವೇ?
ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ನಿಮಗೆ ಸ್ವಲ್ಪವಾದರೂ, ಈ ದೇಶದ ಬಗ್ಗೆ, ಈ ದೇಶದ ಜನಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ನನ್ನ ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ.
1. ಹತ್ತು ವರ್ಷಗಳ ಕಾಲ ಮೂಗನಂತೆ, ಕೀಲಿಕೊಟ್ಟ ಗೊಂಬೆಯಂತೆ, ಕಾರ್ಯ ನಿರ್ವಹಿಸಿದ ಮನಮೋಹನಸಿಂಗ್ ಬಗ್ಗೆ ನಿಮ್ಮ ನಿಲುವೇನು?
2. ಹತ್ತು ವರ್ಷಗಳ ಕಾಲ ಪರೋಕ್ಷವಾಗಿ ದೇಶವನ್ನು ನಿಯಂತ್ರಿಸಿದ ಹಾಗೂ ಈ ದೇಶದ ಜನಸಾಮಾನ್ಯರ ಬದುಕನ್ನು ದುರ್ಬರವಾಗಿಸಿದ ಮಹಿಳೆಯ ಬಗ್ಗೆ ನಿಮ್ಮ ನಿಲುವೇನು?
3. ದೇಶದ ಜನ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವಾಗ ಜನಸಾಮಾನ್ಯರ ಪರಿಸ್ಥಿತಿಯನ್ನು ಗೇಲಿ ಮಾಡುವಂತಹ ಕುಚೋದ್ಯದ ಹೇಳಿಕೆಗಳನ್ನು ನೀಡಿದ ಕಪಿಲ್‌ಸಿಬಲ್, ಚಿದಂಬರಂ, ರಾಜ್‌ಬಬ್ಬರ್ ಅಂತಹವರ ಬಗ್ಗೆ ನಿಮ್ಮ ಅಭಿಪ್ರಾಯವೇನು?
4.ಶತಮಾನದ ಹಗರಣಗಳಾದ 2ಜಿ, ಕಲ್ಲಿದ್ದಲು ಹಗರಣ, ಕಾಮನ್‌ವೆಲ್ತ್ ಹಗರಣ, ರಾಬರ್ಟ್ ವಾದ್ರಾ ಭೂಹಗರಣಗಳ ಬಗ್ಗೆ ನಿಮ್ಮ ನಿಲುವೇನು?
5. ದೇಶಾದ್ಯಂತ ಬಾಂಬ್ ಸ್ಫೋಟಗಳು, ಭಯೋತ್ಪಾದಕ ಚಟುವಟಿಕೆಗಳು ನಡೆದು ಜನಸಾಮಾನ್ಯರ ಮಾರಣ ಹೋಮ ನಡೆಯುತ್ತಿರುವುದರ ಬಗ್ಗೆ ನಿಮ್ಮ ನಿಲುವೇನು?
ಸ್ವಾಮಿ ವಿಶ್ವವಿದ್ಯಾಲಯಗಳ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ಉಪಯೋಗುವ ಯಾವುದೇ ಕೆಲಸವನ್ನು ನಿರ್ವಹಿಸದ ನೀವು ಪ್ರತಿ ಚುನಾವಣೆ ಸಮಯದಲ್ಲಿ ಒಂದು ಪಕ್ಷದ ವಕ್ತಾರರಂತೆ ಮಾತನಾಡುವ ಬದಲು ನಿಮಗೆ ಅಷ್ಟು ಆಸೆ ಇದ್ದರೆ ಖಾದಿ ತೊಟ್ಟು ರಾಜಕೀಯ ಮಾಡಿ. ಅದು ಬಿಟ್ಟು ಜನಸಾಮಾನ್ಯರಿಗೆ ಆ ಪಕ್ಷಕ್ಕೆ ಓಟು ಕೊಡಿ ಈ ಪಕ್ಷಕ್ಕೆ ಓಟು ಕೊಡಬೇಡಿ ಎಂದು ಹೇಳಲು ನಿಮಗೆ ಅಧಿಕಾರ ಕೊಟ್ಟವರು ಯಾರು?
- ಕೇಶವ ಎಂ.ಜಿ., ಮಂಡ್ಯ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement